ಕರ್ನಾಟಕ

karnataka

ETV Bharat / state

ಗ್ಲೂಕೋಸ್​​ ಬಾಟಲಿ ಸಮೇತ ಮತ್ತೊಂದು ವಾರ್ಡ್​ಗೆ ನಡೆದುಕೊಂಡು ಹೋದ ರೋಗಿ! - ಗ್ಲೂಕೋಸ್​ ಬಾಟಲಿ

ಗ್ಲೂಕೋಸ್​ ಬಾಟಲಿ ಸಮೇತ ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ಗೆ ಮಹಿಳಾ ರೋಗಿಯೊಬ್ಬರು ನಡೆದುಕೊಂಡು ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

chikkamagaluru district hospital
ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

By

Published : Apr 8, 2020, 4:00 PM IST

ಚಿಕ್ಕಮಗಳೂರು:ರೋಗಿಯೊಬ್ಬರು ಕೈನಲ್ಲಿ ಗ್ಲೂಕೋಸ್​ ಹಾಕಿದ ಬಾಟಲಿ ಸಮೇತ ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ಗೆ ನಡೆದುಕೊಂಡು ಹೋಗಿರುವ ಘಟನೆ ​ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಗ್ಲೂಕೋಸ್​ ಬಾಟಲಿ ಸಮೇತ ಮತ್ತೊಂದು ವಾರ್ಡ್​ಗೆ ನಡೆದುಕೊಂಡು ಹೋದ ರೋಗಿ

ಜ್ವರ, ಕೈಕಾಲು ನಡುಕವೆಂದು ಮೂಡಿಗೆರೆಯಿಂದ ಬಂದಿದ್ದ ರೋಗಿಗೆ ಆಸ್ಪತ್ರೆಯ ಸಿಬ್ಬಂದಿ ಗ್ಲೂಕೋಸ್​ ಹಾಕಿ ಎಮರ್ಜೆನ್ಸಿ ವಾರ್ಡಿನಿಂದ ಮತ್ತೊಂದು ವಾರ್ಡ್​ಗೆ ಹೋಗಲು ಸೂಚಿಸಿದ್ದಾರೆ. ಆಗ ರೋಗಿ ಗ್ಲೂಕೋಸ್​ ಬಾಟಲಿಯನ್ನು ತನ್ನ ಪೋಷಕರ ನೆರವಿನಿಂದ ಹಿಡಿದುಕೊಂಡು ನಡೆದುಕೊಂಡೇ ಹೋಗಿದ್ದಾರೆ.

ಇದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಸಂಬಂಧಪಟ್ಟವರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ABOUT THE AUTHOR

...view details