ಕರ್ನಾಟಕ

karnataka

ETV Bharat / state

ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ - undefined

ರಾಜ್ಯದೆಲ್ಲೆಡೆ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸಿ ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು.

ಪರ್ಜನ್ಯ ಜಪ

By

Published : Jul 9, 2019, 10:54 PM IST

ಚಿಕ್ಕಮಗಳೂರು:ರಾಜ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸಿ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು.

ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಮಯದಲ್ಲಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮಲೆನಾಡಿನಲ್ಲೂ ಕೃಷಿಗೆ ಹಿನ್ನೆಡೆಯಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಮಳೆಯಾಗಲಿ ಎಂಬ ಉದ್ದೇಶದಿಂದ ಶ್ರೀಕ್ಷೇತ್ರ ಹೊರನಾಡಿನ ಅನ್ನಪೂಣೇಶ್ವರಿ ಸನ್ನಿಧಿಯಲ್ಲಿ ಮೂರು ದಿನಗಳ ಕಾಲ ಪರ್ಜನ್ಯ ಜಪ ಮತ್ತು ಹೊಮ ನಡೆಸಲಾಯಿತು.

ಹೊರನಾಡು ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಪರ್ಜನ್ಯ ಜಪ, ಹೋಮ-ಹವನವನ್ನು ನಡೆಸಲಾಯಿತು.

ಮೊದಲ ದಿನ ಮಳೆ ಮಧ್ಯೆಯೇ ಭದ್ರಾ ನದಿಯಲ್ಲಿ ಆಕಾಶಕ್ಕೆ ಮುಖ ಮಾಡಿ ಪರ್ಜನ್ಯ ಜಪವನ್ನು ಅರ್ಚಕರು ನೆರವೇರಿಸಿದ್ರು. ಉಳಿದೆರಡು ದಿನ ದೇವಾಲಯದ ಆವರಣದಲ್ಲಿ ಹೋಮ ಹವನವನ್ನು ನಡೆಸಿದರು.

ಅನ್ನಪೂರ್ಣೇಶ್ವರಿ ಸಾನಿಧ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪರ್ಜನ್ಯ ಜಪ ನಡೆಯುತ್ತಿದೆ. ಅತಿವೃಷ್ಠಿಯಾಗಲಿ, ಅನಾವೃಷ್ಠಿಯಾಗಲಿ ಪೂಜೆ ನಡೆಯುತ್ತೆ. ಈಗ ಕೂಡ ಮಲೆನಾಡಲ್ಲಿ ಮಳೆ ಬರ್ತಿದ್ರು, ಬಯಲುಸೀಮೆ ಭಾಗದಲ್ಲಿ ಮಳೆ ಅಭಾವ ಉಂಟಾಗಿದೆ. ಹಾಗಾಗಿ, ದೇಶ, ರಾಜ್ಯಕ್ಕೆ ಅಗತ್ಯವಿದ್ದಷ್ಟು ಮಳೆ ಬಂದು ನಾಡಿನ ಜನ ನೆಮ್ಮದಿಯಾಗಿರುವಂತೆ ಬೇಡಿಕೊಂಡು ಪರ್ಜನ್ಯ ಜಪ ನಡೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details