ಕರ್ನಾಟಕ

karnataka

By

Published : May 20, 2021, 3:55 PM IST

ETV Bharat / state

ಮೂಡಿಗೆರೆ: ಸಾವಿರ ಕುಟುಂಬಗಳಿಗೆ ತರಕಾರಿ ಹಂಚಿ ಮಾದರಿಯಾದ ಗ್ರಾಪಂ ಸದಸ್ಯ

ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಹತ್ವದ ಆದೇಶ ಮಾಡಿದ್ದು, ಇಂದಿನಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಸಂಪೂರ್ಣ ಲಾಕ್​ಡೌನ್​ ಜಾರಿಗೊಳಿಸಿದ್ದಾರೆ.

panchayat-member-who-distributes-vegetables-in-mudigere
ಬಡವರಿಗೆ ತರಕಾರಿ ಹಂಚಿದ ಗ್ರಾಮ ಪಂಚಾಯಿತಿ ಸದಸ್ಯ ನವೀನ್

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಲಾಕ್​ಡೌನ್​ ವೇಳೆ ಜನರಿಗೆ ಉಚಿತ ತರಕಾರಿ ವಿತರಣೆ ಮಾಡಿ ಮಾದರಿಯಾಗಿದ್ದಾರೆ.

ಸಾವಿರ ಕುಟುಂಬಗಳಿಗೆ ತರಕಾರಿ ಹಂಚಿ ಮಾದರಿಯಾದ ಪಂಚಾಯಿತಿ ಸದಸ್ಯ

ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಸುಮಾರು ಒಂದು ಸಾವಿರ ಕುಟುಂಬಗಳಿಗೆ ಉಚಿತವಾಗಿ ತರಕಾರಿ ವಿತರಣೆ ಮಾಡಿದ್ದಾರೆ. ಲಾಕ್​ಡೌನ್​ ಹಿನ್ನೆಲೆ ಕೆಲಸವಿಲ್ಲದೆ ಮನೆಯಲ್ಲಿಯೇ ಇರುವ ಜನರಿಗಾಗಿ ನವೀನ್​ ಈ ಕೆಲಸವನ್ನು ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಹತ್ವದ ಆದೇಶ ಮಾಡಿದ್ದು, ಇಂದಿನಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಸಂಪೂರ್ಣ ಲಾಕ್​ಡೌನ್​ ಜಾರಿಗೊಳಿಸಿದ್ದಾರೆ.

ಓದಿ:ರಾಮನಗರ: ಸ್ವಂತ ಹಣದಲ್ಲಿ 20 ಆಕ್ಸಿಜನ್ ಪಾಯಿಂಟ್ ಅಳವಡಿಸಿದ ಸರ್ಕಾರಿ ವೈದ್ಯ

ABOUT THE AUTHOR

...view details