ಚಿಕ್ಕಮಗಳೂರು : ಜಿಲ್ಲೆಯಲ್ಲಿ ಶ್ರೀರಾಮಸೇನೆ ಸಂಘಟನೆ ವತಿಯಿಂದ 15ನೇ ವರ್ಷದ ದತ್ತಮಾಲಾ ಅಭಿಯಾನ ನಡೆಯುತ್ತಿದೆ. ಅಭಿಯಾನದ ಅಂಗವಾಗಿ ಇಂದು ನಗರದಲ್ಲಿ ದತ್ತ ಮಾಲಾಧಾರಿಗಳು ಪಡಿ ಸಂಗ್ರಹ ಮಾಡಿದರು.
ದತ್ತಮಾಲಾ ಅಭಿಯಾನ.. ಪಡಿ ಸಂಗ್ರಹಿಸಿದ ಶ್ರೀರಾಮಸೇನೆ ಸಂಘಟನೆ ಮಾಲಾಧಾರಿಗಳು - ಚಿಕ್ಕಮಗಳೂರು ದತ್ತಮಾಲಾ ಸುದ್ದಿ
ಭಿಕ್ಷಾಟನೆ ಮೂಲಕ ಸಂಗ್ರಹಿಸಿದ ಈ ಪಡಿಯನ್ನು ನಾಳೆ ಇರುಮುಡಿ ರೂಪದಲ್ಲಿ ದತ್ತ ಪೀಠದಲ್ಲಿರುವ ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ..
ಪಡಿ ಸಂಗ್ರಹಿಸಿದ ಮಾಲಾಧಾರಿಗಳು
ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಶ್ರೀರಾಮ ಸಂಘಟನೆಯ ದತ್ತ ಮಾಲಾಧಾರಿಗಳು ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿ, ಅಕ್ಕಿ, ಬೆಲ್ಲ, ವೀಳ್ಯದೆಲೆ, ಕಾಯಿ ಸಂಗ್ರಹಿಸಿದ್ದಾರೆ. ಭಿಕ್ಷಾಟನೆ ಮೂಲಕ ಸಂಗ್ರಹಿಸಿದ ಈ ಪಡಿಯನ್ನು ನಾಳೆ ಇರುಮುಡಿ ರೂಪದಲ್ಲಿ ದತ್ತ ಪೀಠದಲ್ಲಿರುವ ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ.
ಶ್ರೀ ರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸೇರಿ ಹಲವರು ಪಡಿ ಸಂಗ್ರಹದಲ್ಲಿ ಭಾಗಿಯಾಗಿದ್ದರು.