ಚಿಕ್ಕಮಗಳೂರು: 'ಆಕ್ಸಿಜನ್ ಆನ್ ವೀಲ್' ಅಭಿಯಾನಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಸ್ ರೆಡಿಯಾಗಿದ್ದು, ಹಳ್ಳಿಗಳಲ್ಲಿನ ಕೋವಿಡ್ ಸೋಂಕಿತರಿಗೆ ಉಸಿರಾಟ ತೊಂದರೆಯಾದರೆ ಅವರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
'ಆಕ್ಸಿಜನ್ ಆನ್ ವೀಲ್': ಚಿಕ್ಕಮಗಳೂರಿನ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಜ್ಜಾದ ಬಸ್ - ಬಸ್ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ
ಕೆಎಸ್ಆರ್ಟಿಸಿ ಬಸ್ನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಿದೆ. ಹಳ್ಳಿಯಲ್ಲಿ ಕೊರೊನಾ ಸೋಂಕಿತರಿಗೆ ಉಸಿರಾಟ ತೊಂದರೆಯಾದರೇ ಅವರ ಮನೆ ಬಾಗಿಲಿಗೆ ಈ ಬಸ್ ಹೋಗಲಿದೆ. ಒಂದು ವೇಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದಾಗ ಈ ಬಸ್ನಲ್ಲಿ ಆಕ್ಸಿಜನ್ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
ಆಕ್ಸಿಜನ್ ಆನ್ ವೀಲ್
ಕೆಎಸ್ಆರ್ಟಿಸಿ ಬಸ್ನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಿದೆ. ಹಳ್ಳಿಯಲ್ಲಿ ಕೊರೊನಾ ಸೋಂಕಿತರಿಗೆ ಉಸಿರಾಟ ತೊಂದರೆಯಾದರೇ ಅವರ ಮನೆ ಬಾಗಿಲಿಗೆ ಈ ಬಸ್ ಹೊಗಲಿದೆ.
ಒಂದು ವೇಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದಾಗ ಈ ಬಸ್ನಲ್ಲಿ ಆಕ್ಸಿಜನ್ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಡಾಕ್ಟರ್ ಅಥವಾ ಅನುಭವಿ ಸ್ಟಾಫ್ ನರ್ಸ್ ಈ ವಾಹನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಎರಡ್ಮೂರು ದಿನದಲ್ಲಿ ಈ ಬಸ್ ಕಾರ್ಯಾರಂಭ ಮಾಡಲಿದೆ.