ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಇದ್ದಕ್ಕಿದ್ದಂತೆ 50ಕ್ಕೂ ಅಧಿಕ ಮಂದಿಗೆ ವಾಂತಿ-ಭೇದಿ, ಗ್ರಾಮಸ್ಥರಲ್ಲಿ ಆತಂಕ - ಗ್ರಾಮದ ನೀರು, ಆಹಾರ, ಪರಿಶೀಲನೆ

ಇದ್ದಕ್ಕಿದ್ದಂತೆ 50ಕ್ಕೂ ಅಧಿಕ ಜನರಲ್ಲಿ ವಾಂತಿ-ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಮೂಡಿಗೆರೆಯ ಬಿ.ಹೊಸಳ್ಳಿಯ ಭಾರತಿ ಬೈಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಪರಿಶೀಲನೆ
ಪರಿಶೀಲನೆ

By

Published : Apr 28, 2020, 3:47 PM IST

ಚಿಕ್ಕಮಗಳೂರು:ಕೊರೊನಾ ಭೀತಿಯ ನಡುವೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತಿ ಬೈಲು ಗ್ರಾಮದಲ್ಲಿ 50ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅಷ್ಟೂ ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದ್ದಕ್ಕಿದ್ದಂತೆ ಇಲ್ಲಿನ 200 ಕುಟುಂಬಗಳಲ್ಲಿನ 50ಕ್ಕೂ ಅಧಿಕ ಜನರಲ್ಲಿ ವಾಂತಿ-ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಮೂಡಿಗೆರೆಯ ಬಿ.ಹೊಸಳ್ಳಿಯ ಭಾರತಿ ಬೈಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ವಾಂತಿ-ಭೇದಿ ಕುರಿತು ವಿವರಿಸಿದ ಸ್ಥಳೀಯರು

ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಗ್ರಾಮದ ನೀರು, ಆಹಾರ ಪರಿಶೀಲನೆ ನಡೆಸುತ್ತಿದ್ದಾರೆ.

ABOUT THE AUTHOR

...view details