ಚಿಕ್ಕಮಗಳೂರು:ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಬೆಂಗಳೂರಿನ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದು, ಆಸ್ಪತ್ರೆಗಳ ನಿರ್ಲಕ್ಷ್ಯದಿಂದಲೇ ಸಾವನಪ್ಪಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ.
ಕೊರೊನಾ ರಿಪೋರ್ಟ್ ಇದ್ದರೆ ಮಾತ್ರವೇ ಚಿಕಿತ್ಸೆ ಎಂದ್ರು.. ಕೊನೆಗೆ ಸತ್ತಮೇಲೆ ಹಾರ್ಟ್ ಅಟ್ಯಾಕ್ ಎಂದ್ಬಿಟ್ಟರು!! - treatment for who have Corona Report
ಚಿಕ್ಕಮಗಳೂರು ಮೂಲದ 38 ವರ್ಷದ ಜಗನ್ನಾಥ್ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಪತ್ನಿ, 12 ವರ್ಷದ ಮಗಳು ಸಿಕ್ಕ ಸಿಕ್ಕ ಆಸ್ಪತ್ರೆಗಳಲ್ಲಿ ಎಷ್ಟೇ ಕಾಡಿ ಬೇಡಿದ್ರೂ ಪ್ರಯೋಜನವಾಗಿಲ್ಲ. ಕೋವಿಡ್ ರಿಪೋರ್ಟ್ ಇಲ್ಲದೇ ದಾಖಲು ಮಾಡಿಕೊಳ್ಳಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿ ಟ್ರಿಟ್ಮೆಂಟ್ ನೀಡಿಲ್ಲ ಎನ್ನಲಾಗಿದೆ.
ಚಿಕ್ಕಮಗಳೂರು ಮೂಲದ 38 ವರ್ಷದ ಜಗನ್ನಾಥ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಪತ್ನಿ, 12 ವರ್ಷದ ಮಗಳು ಸಿಕ್ಕ ಸಿಕ್ಕ ಆಸ್ಪತ್ರೆಗಳಲ್ಲಿ ಎಷ್ಟೇ ಕಾಡಿ ಬೇಡಿದ್ರೂ ಪ್ರಯೋಜನವಾಗಿಲ್ಲ. ಕೋವಿಡ್ ರಿಪೋರ್ಟ್ ಇಲ್ಲದೇ ದಾಖಲು ಮಾಡಿಕೊಳ್ಳಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿ ಟ್ರಿಟ್ಮೆಂಟ್ ನೀಡಿಲ್ಲ ಎನ್ನಲಾಗಿದೆ.
ಆಸ್ಪತ್ರೆಗಳು ಸುತ್ತಿ ವಿಧಿಯಿಲ್ಲದೇ ಮನೆಯಲ್ಲಿದ್ದಾಗಲೇ ನಿನ್ನೆ ಉಸಿರಾಡಲು ಸಾಧ್ಯವಾಗದೇ ಇದ್ದಾಗ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ, ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ, ಕೊರೊನಾ ಅಲ್ಲ ಎಂದು ವೈದ್ಯರು ಹೇಳಿದ್ದಾರೆ. ಇಷ್ಟಾದ್ರೂ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಮಾರ್ಗಸೂಚಿಯನ್ನ ಅಂತ್ಯ ಸಂಸ್ಕಾರದ ವೇಳೆ ಅನುಸರಿಸಲಾಗಿದೆ. ಈ ವೇಳೆ ಮೃತನ ಪತ್ನಿ, ಮಗಳು ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.