ಕಡಬ:ಕೊರೊನಾ ಸೋಂಕಿಗೆ ಕೋಡಿಂಬಾಳದ ಮಡ್ಯಡ್ಕ ನಿವಾಸಿಯೋರ್ವ ಸಾವನ್ನಪ್ಪಿದ್ದು, ತಾಲೂಕಿನಲ್ಲಿ ಕೊರೊನಾಗೆ ಬಲಿಯಾದ ಎರಡನೇ ವ್ಯಕ್ತಿಯಾಗಿದ್ದಾರೆ.
ಕೊರೊನಾ ಮಹಾಮಾರಿಗೆ ಕಡಬ ತಾಲೂಕಿನಲ್ಲಿ ಎರಡನೇ ಬಲಿ - ಕಡಬ ಸುದ್ದಿ
ಕಡಬ ತಾಲೂಕಿನಲ್ಲಿ ಕೊರೊನಾ ಸೋಂಕಿಗೆ 74 ವರ್ಷದ ವ್ಯಕ್ತಿಯೊಬ್ಬರು ಇಂದು ಬಲಿಯಾಗಿದ್ದಾರೆ.
Corona
74 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು. ಮನೆಯಲ್ಲೇ ಇದ್ದ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಆರೋಗ್ಯ ಇಲಾಖೆ ಸ್ಥಳೀಯಾಡಳಿತದ ಮೇಲುಸ್ತುವಾರಿಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.