ಕರ್ನಾಟಕ

karnataka

ETV Bharat / state

ಕೊರೊನಾ 2ನೇ ಅಲೆಗೆ 70 ವರ್ಷದ ವೃದ್ಧ ಬಲಿ: ಕಾಫಿನಾಡಿನಲ್ಲಿ ಇದು 3ನೇ ಸಾವು - ಚಿಕ್ಕಮಗಳೂರು ಸೋಂಕಿತ ಸಾವು

ಎರಡನೇ ಅಲೆಗೆ ಕಾಫಿನಾಡಿನಲ್ಲಿ ಸಂಭವಿಸಿದ ಮೂರನೇ ಸಾವು ಇದಾಗಿದೆ. ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ 139 ಮಂದಿ ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 142ಕ್ಕೆ ಏರಿಕೆ ಆಗಿದೆ.

one died by corona in chickmagaluru
ಕೊರೊನಾ ಎರಡನೇ ಅಲೆಗೆ 70 ವರ್ಷದ ವೃದ್ಧ ಬಲಿ - ಕಾಫಿನಾಡಿನಲ್ಲಿ ಇದು 3ನೇ ಸಾವು!

By

Published : Apr 16, 2021, 1:52 PM IST

ಚಿಕ್ಕಮಗಳೂರು: ಕೊರೊನಾ ಸೋಂಕಿಗೆ 70 ವರ್ಷದ ವೃದ್ಧ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಕೊರೊನಾ ಎರಡನೇ ಅಲೆಗೆ 70 ವರ್ಷದ ವೃದ್ಧ ಬಲಿ!

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್. ಬಿದರೆ ಮೂಲದ ವೃದ್ಧ ಸಾವನ್ನಪ್ಪಿದ್ದಾರೆ. ಶ್ರದ್ಧಾಂಜಲಿ ವಾಹನದಲ್ಲಿ ಶವ ಸಾಗುತ್ತಿದ್ದಾಗ, ಚಾಲಕ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೆ ಇದ್ದುದು ಕಂಡುಬಂತು.

ಇದನ್ನೂ ಓದಿ:ಪೊಲೀಸ್​ ಇಲಾಖೆಗೂ ಅಂಟಿದ ಸೋಂಕು; ಹೆಚ್ಚಿದ ಆತಂಕ

ಎರಡನೇ ಅಲೆಗೆ ಕಾಫಿನಾಡಿನಲ್ಲಿ ಸಂಭವಿಸಿದ ಮೂರನೇ ಸಾವು ಇದಾಗಿದೆ. ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ 139 ಮಂದಿ ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 142ಕ್ಕೆ ಏರಿಕೆ ಆಗಿದೆ. ಪ್ರತಿದಿನ ಸರಾಸರಿ 30-40 ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕರಣದಿಂದ ಜಿಲ್ಲೆಯ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಗೆ ಪ್ರವಾಸಿಗರನ್ನು ನಿಷೇಧಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details