ಕರ್ನಾಟಕ

karnataka

ETV Bharat / state

ಮಾರುಕಟ್ಟೆಯಲ್ಲಿರುವ ಜನರಿಗೆ ಮಾಸ್ಕ್ ಹಾಕುವಂತೆ ಕೈಮುಗಿದು ಕೇಳಿಕೊಂಡ ಪೌರ ಕಾರ್ಮಿಕರು - Covid rules break

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೂಡ ಜೀಪಿನಲ್ಲಿ ಅನೌನ್ಸ್ ಮಾಡುತ್ತಾ ರೈತರು, ವ್ಯಾಪಾರಿಗಳು, ವರ್ತಕರಲ್ಲಿ ಕೈಮುಗಿದು ಮಾಸ್ಕ್ ಧರಿಸಿ ಅಂತರ ಕಾಪಾಡುವಂತೆ ಪ್ರಾರ್ಥಿಸಿಕೊಂಡಿದ್ದಾರೆ..

ಪೌರಕಾರ್ಮಿಕರು
ಪೌರಕಾರ್ಮಿಕರು

By

Published : Apr 28, 2021, 7:06 PM IST

Updated : Apr 28, 2021, 9:06 PM IST

ಚಿಕ್ಕಮಗಳೂರು: ಎಪಿಎಂಸಿಯಲ್ಲಿ ಇದ್ದ ಜನರನ್ನು ಕಂಡು ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಜನರಲ್ಲಿ ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸುವಂತೆ ಕೈಮುಗಿದು ಪ್ರಾರ್ಥಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ತರೀಕೆರೆ ಪಟ್ಟಣದ ಎಪಿಎಂಸಿಯಲ್ಲಿ ನೂರಾರು ಜನ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದರು. ಅವರಲ್ಲಿ ಬಹುತೇಕರು ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಸಾಮಾಜಿಕ ಅಂತರದ ನಿಯಮವನ್ನೂ ಸಂಪೂರ್ಣ ಗಾಳಿಗೆ ತೂರಿದ್ದರು. ಇದನ್ನ ಕಂಡ ಪಟ್ಟಣ ಪಂಚಾಯತ್‌ನ 20ಕ್ಕೂ ಹೆಚ್ಚು ನೌಕರರು ಮೈಮುಗಿದು ಎಪಿಎಂಸಿ ಮಾರ್ಕೇಟ್‍ನಲ್ಲಿ ಒಂದು ಸುತ್ತು ಹಾಕಿ ಪ್ರಾರ್ಥಿಸಿಕೊಂಡಿದ್ದಾರೆ.

ಮಾಸ್ಕ್ ಹಾಕುವಂತೆ ಕೈಮುಗಿದು ಕೇಳಿಕೊಂಡ ಪೌರ ಕಾರ್ಮಿಕರು

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೂಡ ಜೀಪಿನಲ್ಲಿ ಅನೌನ್ಸ್ ಮಾಡುತ್ತಾ ರೈತರು, ವ್ಯಾಪಾರಿಗಳು, ವರ್ತಕರಲ್ಲಿ ಕೈಮುಗಿದು ಮಾಸ್ಕ್ ಧರಿಸಿ ಅಂತರ ಕಾಪಾಡುವಂತೆ ಪ್ರಾರ್ಥಿಸಿಕೊಂಡಿದ್ದಾರೆ.

Last Updated : Apr 28, 2021, 9:06 PM IST

ABOUT THE AUTHOR

...view details