ಚಿಕ್ಕಮಗಳೂರು: ಜಿಲ್ಲೆಯ ಎಂ ಜಿ ರಸ್ತೆಯ ಫುಟ್ ಪಾತ್ ನಲ್ಲಿ ಸಂಜೆಯ ವೇಳೆ ರೈತನೊಬ್ಬ ತರಕಾರಿಯನ್ನು ಮಾರಾಟ ಮಾಡುವಾಗ ಅಧಿಕಾರಿಗಳು ದರ್ಪವೆಸಗಿದ್ದು, ರಸ್ತೆಯ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ತರಕಾರಿಗಳನ್ನು ಕಸ ತುಂಬುವ ಟ್ರಾಕ್ಟರ್ ಗೆ ತುಂಬಿರುವ ಘಟನೆ ನಡೆದಿದೆ.
ಬಡ ವ್ಯಾಪಾರಿಯ ತರಕಾರಿಯನ್ನು ಕಸದ ಟ್ರ್ಯಾಕ್ಟರ್ಗೆ ತುಂಬಿದ ಅಧಿಕಾರಿಗಳು... ರೊಚ್ಚಿಗೆದ್ದ ಜನ ಮಾಡಿದ್ದೇನು? - ಜಿಲ್ಲಾಡಳಿತ
ಚಿಕ್ಕಮಗಳೂರು ಜಿಲ್ಲೆಯ ಎಂ ಜಿ ರಸ್ತೆಯ ಫುಟ್ ಪಾತ್ ನಲ್ಲಿ ಸಂಜೆಯ ವೇಳೆ ರೈತನೊಬ್ಬ ತರಕಾರಿಯನ್ನು ಮಾರಾಟ ಮಾಡುವಾಗ ಅಧಿಕಾರಿಗಳು ದರ್ಪವೆಸಗಿದ್ದು, ರಸ್ತೆಯ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ತರಕಾರಿಗಳನ್ನು ಕಸ ತುಂಬುವ ಟ್ರಾಕ್ಟರ್ ಗೆ ತುಂಬಿರುವ ಘಟನೆ ನಡೆದಿದೆ.
ಬಡ ವ್ಯಾಪಾರಿಯ ಮೇಲೆ ಅಧಿಕಾರಿಗಳ ದರ್ಪ; ಸಾರ್ವಜನಿಕರಿಂದ ಆಕ್ರೋಶ
ಈ ಘಟನೆಯನ್ನು ನೋಡಿದ ಸಾರ್ವಜನಿಕರು ಹಾಗೂ ಯುವಕರು ರೈತರ ಕೂಡಲೇ ನೆರವಿಗೆ ಬಂದಿದ್ದಾರೆ. ನಂತರ ಅಧಿಕಾರಿಗಳಿಗೆ ದಬಾಯಿಸಿದ್ದಾರೆ. ತಕ್ಷಣ ಅಧಿಕಾರಿಗಳು ತಾವು ಮಾಡಿದ ತಪ್ಪಿನ ಅರಿವಾಗಿ ಟ್ರಾಕ್ಟರ್ ಗೆ ತುಂಬಿದ ತರಕಾರಿಯನ್ನು ವಾಪಸ್ ನೀಡಿದ್ದಾರೆ.
ಈ ರೀತಿ ರೈತರ ಮೇಲೆ ದೌರ್ಜನ್ಯ ಮಾಡಿದ ಅಧಿಕಾರಿಗಳ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಇಂತಹ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.