ಚಿಕ್ಕಮಗಳೂರು:ಜಿಂದಾಲ್ ಕಂಪನಿಗೆ ಕೊಡುತ್ತಿರುವ ಜಾಗ ಫಲವತ್ತಾದ ಹಾಗೂ ಮೈನ್ಸ್ ಇರುವತಂಹ ಜಾಗ. ಅಂತಹ ಭೂಮಿಯನ್ನು ಕಂಪನಿಗೆ ನೀಡುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಲವತ್ತಾದ ಭೂಮಿಯನ್ನು ಸರ್ಕಾರ ಜಿಂದಾಲ್ ಕಂಪನಿಗೆ ನೀಡುತ್ತಿದೆ: ಮಾಜಿ ಶಾಸಕ - undefined
ಮಲೆನಾಡಿನಲ್ಲಿ ಒತ್ತುವರಿ ಜಮೀನನ್ನು ಲೀಸ್ಗೆ ನೀಡುವಂತೆ ಬೆಳಗಾವಿ ಅಧಿವೇಶನದಲ್ಲಿಯೇ ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ ಇದುವರೆಗೂ ಕಿವಿಗೊಡಲಿಲ್ಲ. ಯಾವುದೇ ಕಾರಣಕ್ಕೂ ಜಿಂದಾಲ್ ಕಂಪನಿಗೆ ಸರ್ಕಾರ ಜಮೀನು ನೀಡಬಾರದು ಎಂದು ಆಗ್ರಹಿಸಿದರು.
![ಫಲವತ್ತಾದ ಭೂಮಿಯನ್ನು ಸರ್ಕಾರ ಜಿಂದಾಲ್ ಕಂಪನಿಗೆ ನೀಡುತ್ತಿದೆ: ಮಾಜಿ ಶಾಸಕ](https://etvbharatimages.akamaized.net/etvbharat/prod-images/768-512-3558659-thumbnail-3x2-ex-mla.jpg)
ಡಿ.ಎನ್.ಜೀವರಾಜ್
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಡಿ.ಎನ್.ಜೀವರಾಜ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಾರ್ಗ ಸೂಚಿ ದರದ ಪ್ರಕಾರ ಕಂಪನಿಗೆ ಕೊಡುವ ದರಕ್ಕಿಂತ ಹೆಚ್ಚಿರುತ್ತದೆ. ಆದರೂ ಸರ್ಕಾರ ಪ್ರತಿ ಎಕರೆಯನ್ನು ಕೇವಲ ₹ 1.22 ಲಕ್ಷಕ್ಕೆ ನೀಡುತ್ತಿದೆ. ಮಲೆನಾಡಿನ ರೈತರು ಒತ್ತುವರಿ ಮಾಡಿರುವ ಭೂಮಿಯನ್ನು ಜಿಂದಾಲ್ಗಾಗಿ ಎಕರೆಗೆ ನೀಡುವ ಅಷ್ಟೇ ಹಣದಲ್ಲಿ ಆ ಜಮೀನನ್ನು ರೈತರ ಹೆಸರಿಗೆ ಮಾಡಿಕೊಡಿ. ರೈತರು ಸಾಲ ಮಾಡಿ ಆದರೂ ಸರ್ಕಾರಕ್ಕೆ ಹಣ ಕಟ್ಟುತ್ತಾರೆ. ಇದರಿಂದ ರೈತರೂ ನೆಮ್ಮದಿಯಿಂದ ಬದುಕುತ್ತಾರೆ ಎಂದು ಹೇಳಿದರು.