ಕರ್ನಾಟಕ

karnataka

ETV Bharat / state

ಕಾಫಿನಾಡಲ್ಲಿದೆ ಅಪರೂಪದ ಕನ್ನಡ ದೇವಾಲಯ: ಕನ್ನಡದಲ್ಲೇ ಧಾರ್ಮಿಕ ಪೂಜೆಗಳು, ಮದುವೆ ಸಮಾರಂಭ - Offer prayers in Kannada

ಹಿರೇಮಗಳೂರಿನ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ನಿತ್ಯವೂ ಕನ್ನಡದಲ್ಲೇ ಮಂತ್ರ ಪಠಣ, ಹೋಮ, ಹವನ ನಡೆಯುತ್ತದೆ. ಮದುವೆ ಕಾರ್ಯಕ್ರಮವನ್ನೂ ಕನ್ನಡದಲ್ಲೇ ನೆರವೇರಿಸಿಕೊಡುವುದು ಇಲ್ಲಿನ ಮತ್ತೊಂದು ವಿಶೇಷ. ಇನ್ನೊಂದು ವಿಶೇಷ ಎಂದರೆ ಈ ದೇವಾಲಯದೊಳಗಿನ ಗೋಡೆಗಳೆಲ್ಲವೂ ಕನ್ನಡಮಯ.

offer-prayers-in-kannada-at-kodandarama-temple-in-chikmagaluru
ಕಾಫಿನಾಡಲ್ಲಿದೆ ಅಪರೂಪದ ಕನ್ನಡ ದೇವಾಲಯ: ಕನ್ನಡದಲ್ಲೇ ಧಾರ್ಮಿಕ ಪೂಜೆಗಳು, ಮದುವೆ ಸಮಾರಂಭ

By

Published : Nov 1, 2022, 6:03 PM IST

ಚಿಕ್ಕಮಗಳೂರು:ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾಫಿನಾಡು ಚಿಕ್ಕಮಗಳೂರು ತನ್ನದೇ ಆದ ಚಾಪು ಮೂಡಿಸಿದೆ. ಇಲ್ಲಿನ ಕೋದಂಡರಾಮ ಸ್ವಾಮಿ ದೇವಾಲಯವು ಕನ್ನಡವನ್ನ ಉಳಿಸಿ, ಬೆಳೆಸುವುದರ ಜೊತೆ ಕನ್ನಡದ ಮಹತ್ವವನ್ನು ವಿಶ್ವವ್ಯಾಪಿ ಸಾರುವ ಕೆಲಸದಲ್ಲಿ ನಿರತವಾಗಿದೆ. ಮದುವೆ ಮತ್ತು ಉಪನಯನ ಸೇರಿದಂತೆ ಎಲ್ಲ ಧಾರ್ಮಿಕ ಪೂಜೆಗಳು ಕನ್ನಡದಲ್ಲೇ ನಡೆಸಿಕೊಡಲಾಗುತ್ತದೆ.

ಹೌದು, ಚಿಕ್ಕಮಗಳೂರಿನಿಂದ ಕೇವಲ ಐದಾರು ಕಿಮೀ ದೂರದಲ್ಲಿರುವ ಹಿರೇಮಗಳೂರಿನ ಈ ದೇವಾಲಯದಲ್ಲಿ ಕೋದಂಡರಾಮನಿಗೆ ಕನ್ನಡದಲ್ಲೇ ಪೂಜೆ - ಕೈಂಕರ್ಯಗಳನ್ನು ನೆರವೇರಿಸೋ ಮೂಲಕ ಕಾಫಿನಾಡು ತನ್ನದೇ ಆದ ಖ್ಯಾತಿ ಗಳಿಸಿದೆ. ದೇವಾಲಯಗಳಲ್ಲಿ ಸಂಸ್ಕ್ರತದಲ್ಲಿ ಮಂತ್ರ ಪಠಣ ಮಾಡುವುದು ಸಾಮಾನ್ಯ. ಆದರೆ, ಈ ದೇವಾಲಯದ ಅರ್ಚಕರಾಗಿರುವ ಹಿರೇಮಗಳೂರು ಕಣ್ಣನ್, ಕನ್ನಡದಲ್ಲೇ ಪೂಜೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

ಭಕ್ತರಿಗೆ ಭಕ್ತಿಯ ಜೊತೆ ಕನ್ನಡದ ಪಾಠ: ಈ ದೇವಾಲಯದಲ್ಲಿ ನಿತ್ಯವೂ ಕನ್ನಡದಲ್ಲೇ ಮಂತ್ರ ಪಠಣ, ಹೋಮ, ಹವನ ನಡೆಯುತ್ತದೆ. ಮದುವೆ ಕಾರ್ಯಕ್ರಮವನ್ನೂ ಕನ್ನಡದಲ್ಲೇ ನೆರವೇರಿಸಿಕೊಂಡುವುದು ಇಲ್ಲಿನ ಮತ್ತೊಂದು ವಿಶೇಷ. ಇನ್ನೊಂದು ವಿಶೇಷ ಎಂದರೆ ಈ ದೇವಾಲಯದೊಳಗಿನ ಗೋಡೆಗಳೆಲ್ಲವೂ ಕನ್ನಡಮಯ. ದೇಗುಲದ ವಠಾರವೆಲ್ಲವೂ ಸಂಪೂರ್ಣ ಕನ್ನಡಾಂಬೆಯ ಮಡಿಲು. ದೇವಾಲಯಕ್ಕೆ ಬರುವ ಭಕ್ತರಿಗೆ ಭಕ್ತಿಯ ಜೊತೆ ಕನ್ನಡ ಹಾಗೂ ಜೀವನದ ಪಾಠಗಳ ಸಂದೇಶವುಳ್ಳ ಬರಹಗಳು ದೇವಾಲಯದ ಎಲ್ಲ ಗೋಡೆಗಳ ಮೇಲೆ ರಾರಾಜಿಸುತ್ತಿವೆ.

ಕಾಫಿನಾಡಲ್ಲಿದೆ ಅಪರೂಪದ ಕನ್ನಡ ದೇವಾಲಯ: ಕನ್ನಡದಲ್ಲೇ ಧಾರ್ಮಿಕ ಪೂಜೆಗಳು, ಮದುವೆ ಸಮಾರಂಭ

ನಾಲ್ಕು ದಶಕಗಳ ಹಿಂದೆ ಚಿಕ್ಕಮಗಳೂರಿನ ಹಿರೇಮಗಳೂರಿಗೆ ಆಗಮಿಸಿದ್ದ ಕಣ್ಣನ್ ತಂದೆ ಸಚ್ಚಿದಾನಂದ ಅವರು ಕನ್ನಡ ನೆಲದಲ್ಲಿ ಕನ್ನಡವೇ ಕಣ್ಮರೆಯಾಗುತ್ತಿರುವ ಕಾಲದಲ್ಲಿ ಏಕೆ ಕನ್ನಡವನ್ನು ಉಳಿಸಬಾರದು ಎಂಬ ಕಾರಣಕ್ಕೆ ನಿತ್ಯವೂ ಕೋದಂಡರಾಮನಿಗೆ ಕನ್ನಡದಲ್ಲಿ ಪೂಜೆ ಸಲ್ಲಿಸಲು ಪ್ರಾರಂಭಿಸಿದ್ದರು.

ಇದನ್ನೂ ಓದಿ:ಕನ್ನಡ ಬಳಕೆಗೆ ಕಾನೂನು ಚೌಕಟ್ಟು, ಅಧಿವೇಶನದಲ್ಲಿ ಕನ್ನಡ ಕಡ್ಡಾಯ ಮಸೂದೆ: ಸಿಎಂ ಬೊಮ್ಮಾಯಿ

ಅಪ್ಪನ ಹಾದಿಯನ್ನೇ ಮೈಗೂಡಿಸಿಕೊಂಡ ಕಣ್ಣನ್ ಕೂಡ ಅಂದಿನಿಂದಲೂ ಕನ್ನಡದಲ್ಲಿ ಪೂಜೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡು, ಕನ್ನಡದ ನೆಲದಲ್ಲೇ ಕನ್ನಡದ ಉಳಿವಿಗೆ ಶ್ರಮಿಸುತ್ತಿದ್ದಾರೆ. ದೇಶ ವಿದೇಶಗಳಿಂದಲೂ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ವಿಶ್ವದ ನಾನಾ ಭಾಗಗಳಿಂದ ಬರುವ ವಿದೇಶಿಗರಿಗೆ ಸಂಸ್ಕೃತ ಹೇಳಿಕೊಡುವ ಕಣ್ಣನ್, ಕೋದಂಡರಾಮನಿಗೆ ಕನ್ನಡದಲ್ಲೇ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ.

ಪ್ರತಿ ಮನೆಯಲ್ಲೂ ಕನ್ನಡದಲ್ಲಿ ಪೂಜೆ ಸಲ್ಲಿಸಬೇಕು:ದೇವಾಲಯದಲ್ಲಿ ಮಾತ್ರ ಕನ್ನಡಲ್ಲಿ ಪೂಜೆ ಮಾಡಿದರೆ, ಸಾಲದು ಕನ್ನಡ ಮನದಿಂದ ಬರಬೇಕು. ಪ್ರತಿ ಮನೆಯಲ್ಲೂ ಕನ್ನಡದಲ್ಲಿ ಪೂಜೆ ಮತ್ತು ಪುನಸ್ಕಾರಗಳು ನಡೆಯಬೇಕೆಂಬ ಇಂಗಿತವನ್ನು ಕಣ್ಣನ್ ವ್ಯಕ್ತಪಡಿಸುತ್ತಾರೆ. ಒಟ್ಟಾರೆ, ಕೋದಂಡರಾಮ ಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಿಗೆ ಕನ್ನಡ ನಾಡು ನುಡಿಯ ಬಗ್ಗೆ ಅರಿವೂ ಮೂಡಿಸುವ ಕಾರ್ಯವನ್ನು ಇಲ್ಲಿ ಮಾಡಲಾಗುತ್ತದೆ.

ಇದನ್ನೂ ಓದಿ:ನಡೆ ಕನ್ನಡ, ನುಡಿ ಕನ್ನಡ.. ಸಾರಿಗೆ ಸಂಸ್ಥೆ ಬಸ್​​ನ್ನೇ ಕನ್ನಡಮಯವಾಗಿಸಿದ್ರು ವಿಶಿಷ್ಟ ಈ ಬಸ್ ಚಾಲಕ

ABOUT THE AUTHOR

...view details