ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ 20 ಸಾವಿರ ದಾಟಿದ ಕೊರೊನಾ ಪರೀಕ್ಷೆ.. ಸೋಂಕಿತರ ಸಂಖ್ಯೆ 571 ಕ್ಕೇರಿಕೆ - ಸೋಂಕಿತರ ಸಂಖ್ಯೆ 571 ಚಾಮರಾಜನಗರ

ಇಂದು ಪತ್ತೆಯಾದ 41 ಕೇಸ್​​ಗಳಲ್ಲಿ 2 ವರ್ಷದ ಒಂದು, ನಾಲ್ಕು ವರ್ಷದ ಇಬ್ಬರು, 9 ಹಾಗೂ 10 ವರ್ಷದ ಬಾಲಕಿಯರಿಬ್ಬರು ಸೋಂಕಿಗೆ ತುತ್ತಾಗಿದ್ದಾರೆ..

Chamarajanagar
ಚಾಮರಾಜನಗರ

By

Published : Jul 28, 2020, 8:21 PM IST

ಚಾಮರಾಜನಗರ :ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆ ಇಂದು 20 ಸಾವಿರ ದಾಟಿದೆ. ಸೋಂಕಿತರ ಸಂಖ್ಯೆ 571ಕ್ಕೆ ಏರಿಕೆಯಾಗಿದೆ.

ಇಂದು ಬರೋಬ್ಬರಿ 42 ಪಾಸಿಟಿವ್ ಕೇಸ್ ಪತ್ತೆಯಾಗಿವೆ. 18 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಸಕ್ರಿಯ ಪ್ರಕರಣ ಸಂಖ್ಯೆ 225 ರಷ್ಟಾಗಿದ್ದು, 717 ಮಂದಿ ಮೇಲೆ ನಿಗಾ ಇಡಲಾಗಿದೆ.

ಇಂದು ಪತ್ತೆಯಾದ 41 ಕೇಸ್​​ಗಳಲ್ಲಿ 2 ವರ್ಷದ ಒಂದು, ನಾಲ್ಕು ವರ್ಷದ ಇಬ್ಬರು, 9 ಹಾಗೂ 10 ವರ್ಷದ ಬಾಲಕಿಯರಿಬ್ಬರು ಸೋಂಕಿಗೆ ತುತ್ತಾಗಿದ್ದಾರೆ. 60 ವರ್ಷ ಮೇಲ್ಪಟ್ಟ 6 ಮಂದಿಯೂ ಇಂದಿನ ಕೇಸ್ ಪಟ್ಟಿಯಲ್ಲಿದ್ದು 11 ಐಎಲ್​​ಐ ಪ್ರಕರಣಗಳಿವೆ.

ಯಳಂದೂರು ತಾಲೂಕು ಕಚೇರಿಯ ಸಿಬ್ಬಂದಿ ಓರ್ವನಿಗೆ ಇಂದು ಸೋಂಕು ತಗುಲಿದ್ದರಿಂದ ಯಳಂದೂರು ತಾಲೂಕು ಕಚೇರಿಯನ್ನು ಸೀಲ್​ಡೌನ್​​ ಮಾಡಲಾಗಿದೆ. ಜೂನ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿತ್ತು‌. ಒಂದೇ ತಿಂಗಳಿಗೆ ಕೊರೊನಾ ಸಂಖ್ಯೆ 500ರ ಗಡಿದಾಟಿದೆ.

ABOUT THE AUTHOR

...view details