ಚಿಕ್ಕಮಗಳೂರು:ಕೋಳಿ ಫಾರಂನಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು, ಆದ್ದರಿಂದ ಕೂಡಲೇ ಸ್ಥಳಾಂತರಿಸಬೇಕು ಎಂದು ಎನ್ಆರ್ ಪುರ ತಾಲೂಕು ಸೀತೂರು ಹಾಗೂ ಶೇಡಿಗಾರು ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.
ಕೋಳಿ ಫಾರಂ ತೆರವಿಗೆ ಗ್ರಾಮಸ್ಥರ ಆಗ್ರಹ - Situr and Shadigaru villagers demand poultry farm clearance
ಕುಡಿಯುವ ನೀರಿನ ಟ್ಯಾಂಕ್ ಬಳಿಯೇ ಕೋಳಿ ಫಾರಂ ಇದ್ದು ಇದರಿಂದ ದುರ್ನಾತ ಬೀರುತ್ತಿದೆ. ಅಲ್ಲದೆ ದಿನ ನಿತ್ಯ ಕೋಳಿ ಸಾಗಾಟದ ಲಾರಿಗಳು ಓಡಾಡುವುದರಿಂದ ರಸ್ತೆಯೂ ಹಾಳಾಗಿದೆ. ಜೊತೆಗೆ ಪಕ್ಕದಲ್ಲೇ ಅಬ್ಬಿಗುಂಡಿ ಜಲಪಾತ ಇರುವುದರಿಂದ ಇಲ್ಲಿಗೆ ಆಗಮಿಸುವ ಜನರಿಗೂ ತೊಂದರೆಯಾಗುತ್ತಿದೆ. ಇನ್ನು ಕೋಳಿ ಫಾರಂ ತ್ಯಾಜ್ಯವನ್ನೂ ಅಲ್ಲೇ ಬಿಸಾಡುವುದರಿಂದ ರೋಗಗಳೂ ಹರಡುವ ಭೀತಿ ಶುರುವಾಗಿದೆ.
ಕುಡಿಯುವ ನೀರಿನ ಟ್ಯಾಂಕ್ ಬಳಿಯೇ ಕೋಳಿ ಫಾರಂ ಇದ್ದು, ಇದರಿಂದ ದುರ್ನಾತ ಬೀರುತ್ತಿದೆ. ಅಲ್ಲದೆ ದಿನ ನಿತ್ಯ ಕೋಳಿ ಸಾಗಾಟದ ಲಾರಿಗಳು ಓಡಾಡುವುದರಿಂದ ರಸ್ತೆಯೂ ಹಾಳಾಗಿದೆ. ಜೊತೆಗೆ ಪಕ್ಕದಲ್ಲೇ ಅಬ್ಬಿಗುಂಡಿ ಜಲಪಾತ ಇರುವುದರಿಂದ ಇಲ್ಲಿಗೆ ಆಗಮಿಸುವ ಜನರಿಗೂ ತೊಂದರೆಯಾಗುತ್ತಿದೆ. ಕೋಳಿ ಫಾರಂ ತ್ಯಾಜ್ಯವನ್ನೂ ಅಲ್ಲೇ ಬಿಸಾಡುವುದರಿಂದ ರೋಗಗಳೂ ಹರಡುವ ಭೀತಿ ಶುರುವಾಗಿದೆ.
ಕೋಳಿ ಫಾರಂ ತೆರವಿಗೊಳಿಸುವಂತೆ ಸೀತೂರು ಗ್ರಾಮ ಪಂಚಾಯತ್ ಈಗಾಗಲೇ ಫಾರಂ ಮಾಲೀಕರಿಗೆ ನೋಟೀಸ್ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೋಳಿ ಫಾರಂ ತೆರವುಗೊಳಿಸಲು ಕ್ರಮಗೊಳ್ಳುವಂತೆ ಆಗ್ರಹಿಸಿದ್ದಾರೆ.