ಕರ್ನಾಟಕ

karnataka

ETV Bharat / state

ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆ ಇಲ್ಲ: ಶಾಸಕ ಸಿ.ಟಿ. ರವಿ

ಬಿಜೆಪಿ ಸ್ವತಂತ್ರವಾಗಿಯೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತದೆ ಎಂದು ಶಾಸಕ ಸಿ.ಟಿ. ರವಿ ಸ್ಪಷ್ಟಪಡಿಸಿದರು.

BJP National General Secretary CT Ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

By

Published : Mar 28, 2023, 8:34 PM IST

ಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ : ಸಿ.ಟಿ. ರವಿ

ಚಿಕ್ಕಮಗಳೂರು :ನಮ್ಮ ಮೊದಲ ರಾಜಕೀಯ ವಿರೋಧಿ ಜೆಡಿಎಸ್ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಹೀಗಿರುವಾಗ ಹೊಂದಾಣಿಕೆ ಎಲ್ಲಿಂದ ? ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ ಟಿ ರವಿ ಅವರು, ಕಳೆದ ಬಾರಿ ಚುನಾವಣೆಯಲ್ಲೂ ಕೂಡ ನಾವು ಯಾವುದೇ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಹೊಂದಾಣಿಕೆಯಾಗಿದರೇ ಮಾಜಿ ಸಿಎಂ ಹೆಚ್‍ ಡಿ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೀಶ್ವರ್ ಅವರು ರಾಮನಗರದಲ್ಲಿ ಸ್ಪರ್ಧೆ ಮಾಡುತ್ತಿರಲಿಲ್ಲ ಎಂದು ಹೇಳಿದರು. ಇನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ನನ್ನ ವಿರುದ್ಧ ಜೆಡಿಎಸ್ ಅಭ್ಯರ್ಥಿ ಬಿ ಎಸ್​ ಹರೀಶ್​ ಅವರು ಸ್ಪರ್ಧೆ ಮಾಡಿ 32 ಸಾವಿರ ಮತ ತೆಗೆದುಕೊಂಡರು. ಹೊಂದಾಣಿಕೆ ಮಾಡಿಕೊಂಡಿದ್ದರೇ ಅಷ್ಟು ಮತಗಳನ್ನು ತೆಗೆದುಕೊಳ್ಳುತ್ತಿದ್ದರ? ಎಂದು ಪ್ರಶ್ನೆ ಮಾಡಿ. ನಮಗೆ ಹೊಂದಾಣಿಕೆ ಅಗತ್ಯವಿಲ್ಲ, ಬಿಜೆಪಿ ಸ್ವತಂತ್ರವಾಗಿಯೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಸಿ.ಟಿ.ರವಿ ಮುಖ್ಯಮಂತ್ರಿಯಾಗಲೆಂದು ಅಭಿಮಾನಿಗಳಿಂದ ಕುಮಾರಗಿರಿಗೆ ಪಾದಯಾತ್ರೆ

ನಮ್ಮದು ಸಕಾರಾತ್ಮಕ ರಾಜಕೀಯ- ಸಿ ಟಿ ರವಿ : ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯಿಂದ ಯಾರು ಸ್ಪರ್ಧಿ ಎನ್ನುವುದನ್ನು ಪಾರ್ಲಿಮೆಂಟರಿ ಬೋರ್ಡ್ ಸಿದ್ಧ ಮಾಡುತ್ತದೆ. ನಾವು ಯಾರ ವಿರುದ್ಧ ಅಂತಿಲ್ಲ. ನಾವು ಬಿಜೆಪಿ ಪರ ಅಷ್ಟೆ. ನಮ್ಮದು ವೈಚಾರಿಕ ರಾಜಕೀಯ ಪಕ್ಷವಾಗಿದ್ದು, ನಮ್ಮ ಪಕ್ಷದ ವಿಚಾರವನ್ನು ಬೆಳೆಸೋದಷ್ಟೆ ನಮ್ಮ ಗುರಿ ಆಗಿದೆ. ಹಾಗೆಯೇ ನಮ್ಮದು ನಕಾರಾತ್ಮಕ ರಾಜಕೀಯ ಅಲ್ಲ, ಸಕಾರಾತ್ಮಕ ರಾಜಕೀಯ, ಪಕ್ಷ ಬೆಳೆಸುವುದು ಎಂದು ಸಿ ಟಿ ರವಿ ತಿಳಿಸಿದರು.

ಮಾಡಾಳ್​ ವಿರೂಪಾಕ್ಷಪ್ಪ ಬಂಧನ ವಿಚಾರ : ಬಳಿಕ ಮಾಡಾಳ್​ ವಿರೂಪಾಕ್ಷಪ್ಪ ಬಂಧನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿ ಟಿ ರವಿ ಅವರು, ಕಾನೂನು ಎಲ್ಲರಿಗೂ ಒಂದೇ, ಕಾನೂನು ಅದರ ಕೆಲಸ ಮಾಡುತ್ತದೆ. ತನಿಖೆ ಹಂತದಲ್ಲಿ ನಾವು ಮಧ್ಯ ಪ್ರವೇಶ ಮಾಡುವ ಪ್ರಶ್ನೆಯೇ ಇಲ್ಲ. ನಾವು ಕಾನೂನಿಗಿಂತ ಮಿಗಿಲು ಅಂತ ಕಾಂಗ್ರೆಸ್ಸಿನ ಒಂದು ಕುಟುಂಬ ಸಂವಿಧಾನ, ಕಾನೂನಿಗಿಂತ ಮಿಗಿಲು ಹಾಗೂ ಎತ್ತರದಲ್ಲಿ ಇರುವವರು ಎಂದು ಭಾವಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಕಾನೂನು ಅದರ ಕೆಲಸ ಅದು ಮಾಡುತ್ತದೆ ಎಂದು ರಾಹುಲ್​ ಗಾಂಧಿಗೆ ವಿಷಯಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ ಟಕ್ಕರ್​ ಕೊಟ್ಟರು.

ಇದನ್ನೂ ಓದಿ :ಅವರು ಹೇಳಿದ ಮಾತುಗಳೇ ಅವರಿಗೆ ತಿರುಗುಬಾಣವಾಗುತ್ತವೆ: ಡಿಕೆಶಿ ವಿರುದ್ಧ ಸಿ ಟಿ ರವಿ ವಾಗ್ದಾಳಿ

ಇದನ್ನೂ ಓದಿ :ಮಾಜಿ ಸಿಎಂ ಕುಮಾರಸ್ವಾಮಿ ದೃಷ್ಠಿಯಲ್ಲಿ ಒನಕೆ ಓಬವ್ವ ಮಾಡಿದ್ದು ಅಪರಾಧವಾಗುತ್ತೆ: ಸಿ ಟಿ ರವಿ

ABOUT THE AUTHOR

...view details