ಕರ್ನಾಟಕ

karnataka

ETV Bharat / state

ದೆಹಲಿಯ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯಿಂದ ಯಾರೂ ಭಾಗವಹಿಸಿಲ್ಲ: ಡಿಸಿ ಸ್ಪಷ್ಟನೆ..! - No one attended

ಧರ್ಮ ಸಭೆ ನಡೆದ ಸುಮಾರು 500 ಮೀಟರ್ ದೂರದಲ್ಲಿರುವ ನಿಜಾಮುದ್ದೀನ್ ರೈಲ್ವೆ ಸ್ಟೇಷನ್ ಬಳಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ 5 ಜನರು ಸುತ್ತಾಡಿದ್ದಾರೆ. ಆದರೆ ಆ ಐದು ಜನರು ಈ ಸಭೆಯಲ್ಲಿ ಭಾಗವಹಿಸಿಲ್ಲ.

No one attended the Delhi Dharmic Meeting from the district DC clarified
ದೆಹಲಿಯ ಧಾಮಿರ್ಕ ಸಭೆಯಲ್ಲಿ ಜಿಲ್ಲೆಯಿಂದ ಯಾರು ಭಾಗವಹಿಸಿಲ್ಲಾ: ಡಿಸಿ ಸ್ಪಷ್ಟನೆ..!

By

Published : Apr 1, 2020, 5:03 PM IST

ಚಿಕ್ಕಮಗಳೂರು : ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಯಾರು ಭಾಗವಹಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವಷ್ಟನೆ ನೀಡಿದ್ದಾರೆ.

ಆದರೆ ಧರ್ಮಸಭೆ ನಡೆದ ಸುಮಾರು 500 ಮೀಟರ್ ದೂರದಲ್ಲಿರುವ ನಿಜಾಮುದ್ದೀನ್ ರೈಲ್ವೆ ಸ್ಟೇಷನ್ ಬಳಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ 5 ಜನರು ಸುತ್ತಾಡಿದ್ದಾರೆ. ಆದರೆ, ಆ ಐದು ಜನರು ಈ ಸಭೆಯಲ್ಲಿ ಭಾಗವಹಿಸಿಲ್ಲ. ಅವರ ಬಳಿಗೆ ಈಗಾಗಲೇ ಆರೋಗ್ಯಧಿಕಾರಿಗಳನ್ನು ಕಳುಹಿಸಲಾಗಿದ್ದು, ಅವರಿಗೂ ತಪಾಸಣೆ ಮಾಡಲಾಗುತ್ತಿದೆ.

ಒಂದು ವೇಳೆ, ರೋಗದ ಲಕ್ಷಣ ಕಂಡು ಬಂದರೇ ಅವರಿಗೆ ಚಿಕಿತ್ಸೆ ನೀಡಿ, ಹೋಂ ಕ್ವಾರಂಟೈನ್ ಮಾಡಿಸುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ABOUT THE AUTHOR

...view details