ಚಿಕ್ಕಮಗಳೂರು: ಸಂಪುಟ ರಚನೆಯಾದಾಗ ಅಸಮಾಧಾನ ಕಂಡುಬರುವುದು ಸ್ವಾಭಾವಿಕ. ಬಿಜೆಪಿ ಅವೆಲ್ಲವನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಪುಟ ರಚನೆ ಬಳಿಕ ಆಕಾಂಕ್ಷಿಗಳಿಂದ ಅಸಮಾಧಾನ ಸ್ವಾಭಾವಿಕ: ಸಚಿವ ಮಾಧುಸ್ವಾಮಿ - karnataka political news
ಬಿಜೆಪಿ ರಾಜ್ಯ ಸಂಪುಟ ರಚನೆ ನಂತರ ಎದ್ದಿರುವ ಅಸಮಾಧಾನ ಕುರಿತು ಚಿಕ್ಕಮಗಳೂರಿನಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿದರು. ಇಂತಹ ಭಿನ್ನಾಭಿಪ್ರಾಯ ಸ್ವಾಭಾವಿಕ ಎಂದು ಹೇಳಿದ್ರು.
ಸಚಿವ ಜೆ.ಸಿ.ಮಾಧುಸ್ವಾಮಿ
ಬಿಜೆಪಿ ರಾಜ್ಯ ಸಂಪುಟ ರಚನೆ ನಂತರ ಎದ್ದಿರುವ ಅಸಮಾಧಾನ ಕುರಿತು ಚಿಕ್ಕಮಗಳೂರಿನಲ್ಲಿ ಅವರು ಪ್ರತಿಕ್ರಿಯಿಸಿದರು.
ಬಿಜೆಪಿಯಲ್ಲಿ ಯಾರೂ ರೆಬಲ್ ಆಗಿಲ್ಲ. ಕೆಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ನಾಯಕರು ಮಾತನಾಡುತ್ತಾರೆ. ಇನ್ನೊಂದು ಹಂತದ ಸಚಿವ ಸಂಪುಟ ರಚನೆಯ ಅವಕಾಶವಿದೆ. ಉಮೇಶ್ ಕತ್ತಿ ಸೇರಿದಂತೆ ಎಲ್ಲರೂ ನಮ್ಮ ಜೊತೆ ಇರಲಿದ್ದಾರೆ ಎಂದು ಮಾಧುಸ್ವಾಮಿ ಹೇಳಿದ್ರು.