ಕರ್ನಾಟಕ

karnataka

ETV Bharat / state

ಬೇರೆ ಜಿಲ್ಲೆಯಿಂದ ಬರುವವರಿಗೆ ಹೋಂ ಕ್ವಾರಂಟೈನ್​​ ಇಲ್ಲ: ಚಿಕ್ಕಮಗಳೂರು ಡಿಸಿ - DC Dr. Bagadi Gautam

ರೇಡ್ ಝೋನ್​ನಿಂದ ಬರುವವರಿಗೆ ಕೇವಲ ಸ್ಕ್ರೀನಿಂಗ್ ಮಾಡುತ್ತಿದ್ದು, ಹೋಂ ಕ್ವಾರಂಟೈನ್ ಹಾಗೂ ಸ್ಟಾಪಿಂಗ್ ಮಾಡುತ್ತಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.

DC Dr. Bagadi Gautam
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

By

Published : May 9, 2020, 8:39 PM IST

ಚಿಕ್ಕಮಗಳೂರು: ಸರ್ಕಾರದ ಆದೇಶದ ಪ್ರಕಾರ ಬೇರೆ ಜಿಲ್ಲೆಯಿಂದ ಬರುವ ಜನರನ್ನು ಹೋಂ ಕ್ವಾರಂಟೈನ್ ಮಾಡುವುದಿಲ್ಲ. ಅಲ್ಲದೇ ಅವರ ಕೈಗೆ ಸೀಲ್​ ಕೂಡ ಹಾಕೋದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್

ಈ ಬಗ್ಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಒಳಗಡೆ ಪಾಸ್ ತಗೆದುಕೊಂಡು ಅಂತರ್ ರಾಜ್ಯದವರು ಬರಬಹುದು. ಬೇರೆ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಬರುವವರನ್ನು ಹೋಂ ಕ್ವಾರಂಟೈನ್ ಮಾಡುತ್ತಿದ್ದೆವು. ವಿದೇಶ, ಬೇರೆ ರಾಜ್ಯದಿಂದ ಜಿಲ್ಲೆಗೆ ಬರುವವರಿಗೆ ಈ ರೀತಿ ಮಾಡಲಾಗುತ್ತದೆ. ಆದರೆ ನಮ್ಮ ಜಿಲ್ಲೆಯಲ್ಲಿ ಕೊರೊನಾ ಸಮುದಾಯಗಳಿಗೆ ಹರಡುವ ಮಟ್ಟಕ್ಕೆ ಇಲ್ಲ. ಹಾಗಾಗಿ ರೇಡ್ ಝೊನ್​ನಿಂದ ಬರುವವರಿಗೆ ಕೇವಲ ಸ್ಕ್ರೀನಿಂಗ್ ಮಾಡುತ್ತಿದ್ದು, ಹೋಂ ಕ್ವಾರಂಟೈನ್ ಹಾಗೂ ಸ್ಟಾಪಿಂಗ್ ಮಾಡುತ್ತಿಲ್ಲ. ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳು ಕಂಡು ಬಂದರೆ ಅಂತವರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.

ABOUT THE AUTHOR

...view details