ಚಿಕ್ಕಮಗಳೂರು:ಇಂದು ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ, ಜಿಲ್ಲೆಯಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿರುವ ನೆರೆ ಸಂತ್ರಸ್ತರ ಪಾಲಿಗೆ ಏನೂ ಇಲ್ಲದಂತಾಗಿದೆ.
ಚಿಕ್ಕಮಗಳೂರು ನೆರೆ ಸಂತ್ರಸ್ತರ ಪಾಲಿಗಿಲ್ಲ ಗೌರಿ-ಗಣೇಶ ಸಂಭ್ರಮ.. - ನಿರಾಶ್ರಿತರ ಕೇಂದ್ರ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ 40 ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿದ್ದಾರೆ. ನೆರೆ ಸಂತ್ರಸ್ತರ ಪಾಲಿಗೆ ಹಬ್ಬವೂ ಇಲ್ಲದಂತಾಗಿದೆ.
ನೆರೆ ಸಂತ್ರಸ್ತರ ಪಾಲಿಗಿಲ್ಲ ಗೌರಿ ಗಣೇಶ ಸಂಭ್ರಮ...
ಜಿಲ್ಲೆಯಲ್ಲಿ ಸುರಿದ ರಣಭೀಕರ ಮಳೆಯಿಂದ ಮೂಡಿಗೆರೆ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿವೆ. ಇವರ ಪಾಲಿಗೆ ಹಬ್ಬವೂ ಇಲ್ಲದಂತಾಗಿದೆ. ಇವರಿಗೆ ಹಬ್ಬಕ್ಕಿಂತಲೂ ಹೊಸ ಬದುಕು ಕಟ್ಟಿಕೊಳ್ಳುವ ಆತಂಕವೇ ಹೆಚ್ಚಾಗಿದೆ.
ಕಳೆದ 23 ದಿನಗಳಿಂದ ನಿರಾಶ್ರಿತರ ಕೇಂದ್ರದಲ್ಲಿರುವ ಇವರು ಮುಂದಿನ ಬದುಕು ಕಾಣದೇ ಬದುಕು ದೂಡುತ್ತಿದ್ದಾರೆ. ಸರ್ಕಾರ ಬಾಡಿಗೆ ಮನೆ ಹುಡುಕಿ ಹೊರಡಿ ಅಂತಿದೆ. ಆದರೆ, ಎಲ್ಲಿಗೆ ಹೋಗೋದು, ಏನ್ ಮಾಡೋದು, 5 ಸಾವಿರ ರೂಪಾಯಿನಲ್ಲಿ ಹೇಗೆ ಬದುಕು ಸಾಗಿಸೋದು ಎಂಬ ಯೋಚನೆಯಲ್ಲಿ ಕಣ್ಣೀರಿಡುತ್ತಿದ್ದಾರೆ.