ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು : ಯುಗಾದಿ ಹಬ್ಬದಂದೇ ವರದಕ್ಷಿಣೆ ಕಿರುಕುಳಕ್ಕೆ ನವ ವಿವಾಹಿತೆ ಬಲಿ? - ಚಿಕ್ಕಮಗಳೂರು ನವವಿವಾಹಿತೆ ಸಾವು ಪ್ರಕರಣ

ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ..

newly-married-woman-suspicious-death-in-chikkamagaluru
ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನವ ವಿವಾಹಿತೆ ಬಲಿ

By

Published : Apr 2, 2022, 9:22 PM IST

ಚಿಕ್ಕಮಗಳೂರು :ಯುಗಾದಿ ಹಬ್ಬದಂದೇ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ. ಗಾನವಿ (27) ಎಂಬುವರು ಮೃತ ಮಹಿಳೆ. ಪತಿಯ ಮನೆಯವರೇ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಪತಿ ನಂದಿತ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೆಗೌಡ ಎಂಬುವರೇ ವಿಷ ಕುಡಿಸಿ ತಮ್ಮ ಮಗಳನ್ನು ಕೊಲೆಗೈದಿದ್ದಾರೆ ಎಂದು ಗಾನವಿ ಪೋಷಕರು ಆರೋಪ ಮಾಡಿದ್ದಾರೆ. ಕಳೆದ ವರ್ಷವಷ್ಟೇ ಗಾನವಿಯನ್ನ ನಂದಿತ್ ಮದುವೆಯಾಗಿದ್ದ. ಮೃತ ಗಾನವಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದವಳು.

ಪತಿ ನಂದಿತ್ ಮದುವೆಯಾದ ಬಳಿಕ ತವರು ಮನೆಯಿಂದ ಹಣ ತರುವಂತೆ ಅನೇಕ ಬಾರಿ ದೈಹಿಕ ಕಿರುಕುಳ ನೀಡಿ, ಪೀಡಿಸುತ್ತಿದ್ದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇತ್ತೀಚೆಗಷ್ಟೇ 2 ಲಕ್ಷ ರೂ. ಹಣವನ್ನು ಗಾನವಿ ತಂದೆ ಲೋಕಪ್ಪಗೌಡ ನೀಡಿದ್ದರು. ಗಾನವಿ ಗಂಡ ಹಲ್ಲೆ ಮಾಡಿರುವುದು, ಬೈದಿರುವುದನ್ನ ಮೊಬೈಲ್​ನಲ್ಲಿ ಗಾನವಿ ರೆಕಾರ್ಡ್ ಮಾಡಿಕೊಂಡಿದ್ದಳು ಎಂದು ಹೇಳಲಾಗುತ್ತಿದೆ.

ಇದರಿಂದ ಕುಪಿತಗೊಂಡು ವಿಷ ಕುಡಿಸಿ ಕೊಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ವೃದ್ದನ ಮೇಲೆ ಬಿಬಿಎಂಪಿ ಕಸದ ಲಾರಿ ಹರಿಸಿ ಪರಾರಿಯಾಗಿದ್ದ ಚಾಲಕನ ಬಂಧನ

ABOUT THE AUTHOR

...view details