ಚಿಕ್ಕಮಗಳೂರು :ಮನುಷ್ಯತ್ವವಿಲ್ಲದ ಕ್ರೂರಿಗಳು ನವಜಾತ ಶಿಶುವನ್ನು ಪೊದೆಗೆಸೆದು ಹೋಗಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಹಸುಗೂಸನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಮೂಡಿಗೆರೆ ತಾಲೂಕಿನ ಬಿಳಗುಳದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಪೊದೆಯೊಳಗಿನಿಂದ ಹಸುಗೂಸಿನ ಕೂಗು ಕೇಳಿ ಜನರು ಸ್ಥಳಕ್ಕೆ ಹೋಗಿದ್ದಾರೆ. ಕೂಡಲೇ ಸ್ಥಳೀಯರು ಈ ಹಸುಗೂಸನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.