ಕರ್ನಾಟಕ

karnataka

ETV Bharat / state

ಕೈಹಿಡಿದ ನವಜೋಡಿ ಜತೆಜತೆಯಾಗಿಯೇ ವಾನರಸೇನೆಗೆ ಹಣ್ಣು-ಹಂಪಲು ದಾನ.. - ದಂಪತಿಗಳಿಂದ ಹಣ್ಣು ಹಂಪಲು ದಾನ ಸುದ್ದಿ

ಮಂಗಗಳು ಚಾರ್ಮಾಡಿ ಘಾಟಿಯ ರಸ್ತೆ ಬದಿಯ ತಡೆಗೋಡೆಗಳ ಮೇಲೆ ಸಾಲಾಗಿ ಕುಳಿತು ಹಣ್ಣನ್ನ ತಿನ್ನೋ ದೃಶ್ಯ ನೋಡೋ ಕಣ್ಣಿಗೆ ಆಕರ್ಷಣೀಯವಾಗಿತ್ತು..

ಮಂಗಗಳಿಗೆ ಆಹಾರ ನೀಡುತ್ತಿರುವ ದಂಪತಿ
ಮಂಗಗಳಿಗೆ ಆಹಾರ ನೀಡುತ್ತಿರುವ ದಂಪತಿ

By

Published : Nov 29, 2020, 3:26 PM IST

ಚಿಕ್ಕಮಗಳೂರು: ನವ ಜೋಡಿಯೊಂದು ಮಂಗಗಳಿಗೆ ಹಣ್ಣು-ಹಂಪಲು ದಾನ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಜಯಪಾಲ್ ಎಂಬುವರು ನಿನ್ನೆ ಅನಿತಾ ಎಂಬುವರ ಜೊತೆ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಮನೆ ತುಂಬಾ ನೆಂಟರು, ಸ್ನೇಹಿತರು ಇದ್ದರೂ ಕೂಡ ಪರಿಸರ ಹಾಗೂ ಪ್ರಾಣಿ ಪ್ರಿಯರಾಗಿರುವ ಜಯಪಾಲ್, ಇಂದು ಪತ್ನಿಯೊಂದಿಗೆ ಚಾರ್ಮಾಡಿ ಘಾಟಿಗೆ ತೆರಳಿ ವಾನರ ಸೇನೆಗೆ ಹಣ್ಣು-ಹಂಪಲುಗಳನ್ನು ನೀಡಿದ್ದಾರೆ.

ನವದಂಪತಿಯ ಕೈಯಲ್ಲಿ ಹಣ್ಣುಹಂಪಲುಗಳನ್ನ ನೋಡುತ್ತಿದ್ದ ಮಂಗಗಳು ನಾ ಮುಂದು, ತಾ ಮುಂದು ಎಂದು ಹಣ್ಣುಗಳನ್ನ ತಿನ್ನಲು ಮುಗಿಬಿದ್ದವು.

ಮಂಗಗಳಿಗೆ ಆಹಾರ ನೀಡುತ್ತಿರುವ ದಂಪತಿ

ಮಂಗಗಳು ಚಾರ್ಮಾಡಿ ಘಾಟಿಯ ರಸ್ತೆ ಬದಿಯ ತಡೆಗೋಡೆಗಳ ಮೇಲೆ ಸಾಲಾಗಿ ಕುಳಿತು ಹಣ್ಣನ್ನ ತಿನ್ನೋ ದೃಶ್ಯ ನೋಡೋ ಕಣ್ಣಿಗೆ ಆಕರ್ಷಣೀಯವಾಗಿತ್ತು. ಒಟ್ಟಾರೆಯಾಗಿ ಮಂಗಗಳಿಗೆ ಹಣ್ಣು-ಹಂಪಲು ಕೊಡಲು ದೂರದ ಊರಿಂದ ವಧು-ವರರು ಬಂದಿರೋದನ್ನು ಕಂಡು ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದರು.

ABOUT THE AUTHOR

...view details