ಚಿಕ್ಕಮಗಳೂರು :ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠಕ್ಕೆ ನೂತನ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಜಗದ್ಗುರು ರಂಭಾಪುರಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನೂತನ ಗೃಹಮಂತ್ರಿಯವರನ್ನು ಆತ್ಮೀಯವಾಗಿ ಮಠಕ್ಕೆ ಬರಮಾಡಿಕೊಂಡ ರಂಭಾಪುರಿ ಶ್ರೀಗಳು ಗೌರವ ಸಮರ್ಪಣೆ ಮಾಡಿದರು. ನಂತರ ಕೆಲ ಸಮಯ ಕುಶಲೋಪರಿ ಕುರಿತು ಚರ್ಚೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಜ್ಞಾನೇಂದ್ರ ಅವರು, ಜಿಲ್ಲೆಯಲ್ಲಿ ಕೊರೊನಾ ಬೆಳವಣಿಗೆ ಹಾಗೂ ಪ್ರವಾಹದ ಸಮೀಕ್ಷೆ ನಡೆಸಲು ನಾನು ಬಂದಿದ್ದೇನೆ. ಇಂದು ಬೆಳಗ್ಗಿನಿಂದಲೂ ಜಿಲ್ಲೆಯಲ್ಲಿ ಸಂಚರಿಸಿ ಅಧಿಕಾರಿಗಳನ್ನು ಭೇಟಿಯಾಗಿ ಕೋವಿಡ್ ಕುರಿತು ನಿರ್ದೇಶನ ನೀಡುವ ಕೆಲಸ ಮಾಡುತ್ತೇನೆ ಎಂದರು.