ಚಿಕ್ಕಮಗಳೂರು:ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಯಡವಟ್ಟಿನಿಂದ ಸುಮಾರು 12 ಎಕರೆ ಕಾಫಿ ತೋಟ ನಾಶವಾಗಿರುವ ಘಟನೆ ಜಿಲ್ಲೆಯ ಮಾಕೋಡು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು: ಕಾರ್ಮಿಕರ ಅಜಾಗರೂಕತೆಗೆ ಬಲಿಯಾದ 12 ಎಕರೆ ಕಾಫಿ ತೋಟ - ಚಿಕ್ಕಮಗಳೂರು ಕಾಫಿ ತೋಟ ಸಂಬಂಧಿತ ಸುದ್ದಿ
ಕಾಫಿ ತೋಟಕ್ಕೆ ಕಾಂಟಾಪ್ ಸಿಂಪಡಿಸುವ ಬದಲು ರೌಂಡಪ್ ಕಳೆ ನಾಶಕ ಸಿಂಪಡನೆ ಮಾಡಿದ್ದು, ಸುಮಾರು 12 ಎಕರೆ ಕಾಫಿ ಬೆಳೆ ನಾಶವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಾಶವಾಗಿರುವ ಕಾಫಿ ತೋಟ
ಕಾಫಿ ತೋಟಕ್ಕೆ ಕಾಂಟಾಪ್ ಸಿಂಪಡಿಸುವ ಬದಲು ರೌಂಡಪ್ ಕಳೆನಾಶಕ ಸಿಂಪಡಣೆ ಮಾಡಿದ ಹಿನ್ನೆಲೆ 12 ಎಕರೆ ಕಾಫಿ ತೋಟ ಸಂಪೂರ್ಣ ಸುಟ್ಟು ಹೋಗಿದೆ.
ಕಾಫಿ ಬೆಳೆಗಾರ ಕಲ್ಲೇಗೌಡ ಎಂಬುವವರಿಗೆ ಸೇರಿದ ಕಾಫಿ ತೋಟ ಸಂಪೂರ್ಣ ಸರ್ವ ನಾಶವಾಗಿದ್ದು, ಕಾಫಿ ಬೆಳೆ ಸೇರಿದಂತೆ ಕಾಳುಮೆಣಸು ಬೆಳೆಯೂ ಹಾನಿಗೊಳಗಾಗಿದೆ. ಅಸ್ಸೋಂ ಕಾರ್ಮಿಕರ ಯಡವಟ್ಟು ಹಾಗೂ ರೈಟರ್ ಅಜಾಗರೂಕತೆಯಿಂದ ಬೆಳೆ ಹಾನಿಯಾಗಿದೆ. ಇನ್ನು ಈ ಘಟನೆ ನಡೆದ ಹಿನ್ನೆಲೆಯಲ್ಲಿ ಕಾಫಿ ತೋಟದ ರೈಟರ್ ವಿಷಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.