ಕರ್ನಾಟಕ

karnataka

ETV Bharat / state

ಅಸ್ವಸ್ಥಗೊಂಡ 16 ಅಡಿ ಉದ್ದದ ಹೆಬ್ಬಾವು: ಸ್ಥಳೀಯರಿಂದ ರಕ್ಷಣೆ - ಸ್ಥಳೀಯರಿಂದ ಹೆಬ್ಬಾವು ರಕ್ಷಣೆ

ಚಿಕ್ಕಮಗಳೂರು ಜಿಲ್ಲೆಯ ಎನ್ಆರ್​​ಪುರ ತಾಲೂಕಿನ ಬಾಳೆಹೊನ್ನೂರಿನ ಹುಯಿಗೆರಿ ಗ್ರಾಮದ ಸಮೀಪದ ರಸ್ತೆಯಲ್ಲಿ ಸುಮಾರು 16 ಅಡಿಯ ಉದ್ದದ ಹೆಬ್ಬಾವೊಂದು ಗಾಯಗೊಂಡು ಸಾವು ಬದುಕಿನೊಡನೆ ಹೋರಾಡುತ್ತಿತ್ತು.

natives protect python
ಅಸ್ವಸ್ಥಗೊಂಡ 16 ಅಡಿ ಉದ್ದದ ಹೆಬ್ಬಾವು: ಸ್ಥಳೀಯರಿಂದ ರಕ್ಷಣೆ

By

Published : Aug 11, 2020, 12:06 PM IST

ಚಿಕ್ಕಮಗಳೂರು: ಅಸ್ವಸ್ಥಗೊಂಡ ಭಾರಿ ಗಾತ್ರದ ಹೆಬ್ಬಾವನ್ನು ಸ್ಥಳೀಯರು ರಕ್ಷಣೆ ಮಾಡಿ, ಅದಕ್ಕೆ ಚಿಕಿತ್ಸೆ ನೀಡಿದ್ದಾರೆ.

ಅಸ್ವಸ್ಥಗೊಂಡ 16 ಅಡಿ ಉದ್ದದ ಹೆಬ್ಬಾವು: ಸ್ಥಳೀಯರಿಂದ ರಕ್ಷಣೆ

ಚಿಕ್ಕಮಗಳೂರು ಜಿಲ್ಲೆಯ ಎನ್ಆರ್​​ಪುರ ತಾಲೂಕಿನ, ಬಾಳೆಹೊನ್ನೂರಿನ ಹುಯಿಗೆರಿ ಗ್ರಾಮದ ಸಮೀಪದ ರಸ್ತೆಯಲ್ಲಿ ಸುಮಾರು 16 ಅಡಿಯ ಉದ್ದದ ಹೆಬ್ಬಾವೊಂದು ಗಾಯಗೊಂಡು ಸಾವು ಬದುಕಿನೊಡನೆ ಹೋರಾಡುತ್ತಿತ್ತು. ಈ ಕುರಿತು ಸ್ಥಳೀಯರು ಬಾಳೆಹೊನ್ನೂರು ಅರಣ್ಯ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಕೂಡಲೇ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಮಸಿ ಗದ್ದೆಯ ಉರಗ ತಜ್ಞ ಪೀಟರ್ ಅವರನ್ನು ಕರೆಸಿ ಬಾಳೆಹೊನ್ನೂರಿನ ಪಶು ವೈದ್ಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪಶು ವೈದ್ಯ ಅಧಿಕಾರಿ ಡಾ.ನಿದಾ ಅವರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಸರಿಯಾಗಿ ಆಹಾರ ಸಿಗದೇ ಗಾಯಗೊಂಡ ಹೆಬ್ಬಾವು ಸಂಪೂರ್ಣವಾಗಿ ನಿತ್ರಾಣಗೊಂಡಿತ್ತು. ಆಸ್ಪತ್ರೆಯ ವೈದ್ಯರು ಈ ಹೆಬ್ಬಾವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಡ್ರಿಪ್ಸ್ ಹಾಕಿ ಆರೈಕೆ ಮಾಡಿದ್ದಾರೆ.

ನಂತರ ಸ್ವಲ್ಪ ಪ್ರಮಾಣದಲ್ಲಿ ಈ ಹೆಬ್ಬಾವಿನಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಹೆಬ್ಬಾವನ್ನು ಭದ್ರಾ ಅಭಯಾರಣ್ಯದಲ್ಲಿ ಬಿಟ್ಟಿದ್ದಾರೆ.

ABOUT THE AUTHOR

...view details