ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ, ಮುತ್ತೋಡಿಯಲ್ಲಿ ಪ್ರವಾಸಿಗರು ಸಫಾರಿ ಹೋಗುತ್ತಿದ್ದ ವೇಳೆಯಲ್ಲಿ ಕೆರೆಯಲ್ಲಿ ಮಲಗಿ ವಿಶ್ರಮಿಸುತ್ತಿದ್ದ ಹುಲಿ, ರಸ್ತೆಯಲ್ಲಿ ಉಡ ಹಾಗೂ ನರಿ, ಪ್ರವಾಸಿಗರ ಕಣ್ಣಿಗೆ ಬಿದ್ದಿದೆ.
ಮುತ್ತೋಡಿ ಅರಣ್ಯದಲ್ಲಿ ಒಮ್ಮೆಗೆ ವಿವಿಧ ಪ್ರಾಣಿಗಳನ್ನು ಕಣ್ತುಂಬಿಕೊಂಡ ಪ್ರವಾಸಿಗರು - Tiger
ಮುತ್ತೋಡಿಯಲ್ಲಿ ಪ್ರವಾಸಿಗರು ಸಫಾರಿ ಹೋಗುತ್ತಿದ್ದ ವೇಳೆ ಹುಲಿ, ಉಡ, ನರಿ ಮೂರು ಪ್ರಾಣಿಗಳನ್ನು ಕಂಡು ಫುಲ್ ಖುಷ್ ಆಗಿದ್ದಾರೆ.
ಭದ್ರ ವನ್ಯಜೀವಿ ರಕ್ಷಿತಾರಣ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆ, ಹುಲಿ, ಆನೆ, ಜಿಂಕೆ, ನರಿ, ಉಡ ಸೇರಿದಂತೆ ಅನೇಕ ಕಾಡು ಪ್ರಾಣಿಗಳಿವೆ. ಕಾಡಿನ ಮಧ್ಯದೊಳಗೆ ಅವಿತುಕೊಳ್ಳುವ ಕಾಡು ಪ್ರಾಣಿಗಳು ಕಣ್ಣಿಗೆ ಕಾಣುವುದೇ ಅಪರೂಪ. ಈ ಮಧ್ಯೆ ಹುಲಿ, ಉಡ, ನರಿ ಈ ಮೂರು ಪ್ರಾಣಿಗಳು ಪ್ರವಾಸಿಗರು ಸಫಾರಿ ತೆರಳುವ ವೇಳೆಯಲ್ಲಿ ಪತ್ತೆಯಾಗಿದೆ.
ಈ ಅಭಯಾರಣ್ಯದಲ್ಲಿ ಸಫಾರಿಗೆ ಹೋಗುವ ವೇಳೆ, ಈ ಪ್ರಾಣಿಗಳು ಯಾವುದೇ ಭಯವಿಲ್ಲದೇ ಸಫಾರಿ ವಾಹನದ ಮುಂದೆಯೇ ನಿಂತುಕೊಂಡಿವೆ. ಹುಲಿ, ನರಿ, ಉಡ ನೋಡಿದ ಪ್ರವಾಸಿಗರು, ಫುಲ್ ಖುಷ್ ಆಗಿದ್ದು, ತಮ್ಮ ಮೊಬೈಲ್ ಗಳಲ್ಲಿ ಸೆರೆಯಾದ ಈ ಪ್ರಾಣಿಗಳ ಚಿತ್ರಗಳನ್ನು, ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿಗರು ಹಂಚಿಕೊಳ್ಳುತ್ತಿದ್ದಾರೆ.