ಚಿಕ್ಕಮಗಳೂರು:ಶಿವಮೊಗ್ಗದಲ್ಲಿ ಕೊರೊನಾ ರೂಪಾಂತರ ವೈರಸ್ ಪತ್ತೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಜನರಿಗೆ ಆತಂಕ ಶುರುವಾಗಿದೆ. ಈ ವೈರಸ್ ಸೋಂಕಿತರೊಬ್ಬರು ತರೀಕೆರೆಯ ಸಂಬಂಧಿ ಮನೆಗೆ ಬಂದು ಹೋಗಿದ್ದರಂತೆ.
ತರೀಕೆರೆಯಲ್ಲಿ ರೂಪಾಂತರ ಕೊರೊನಾ ವೈರಸ್ ಆತಂಕ - ತರೀಕೆರೆ ತಾಲೂಕು ಸುದ್ದಿ
ರೂಪಾಂತರ ಕೊರೊನಾ ವೈರಸ್ ಸೋಂಕಿತರೊಬ್ಬರು ತರೀಕೆರೆಗೆ ಬಂದಿದ್ದು, ಪಟ್ಟಣದ ಸಂಬಂಧಿ ಮನೆಗೆ ಬಂದು ಹೋಗಿದ್ದರು. ಹೀಗಾಗಿ ತರೀಕೆರೆ ತಾಲೂಕಿನಲ್ಲಿ ಆತಂಕ ಕಾಡಲು ಪ್ರಾರಂಭವಾಗಿದೆ.
tarikere
ಈಗಾಗಲೇ ಸೋಂಕಿತ ಸಂಬಂಧಿಕರ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಯುಕೆಯಿಂದ ಆಗಮಿಸಿದ್ದ ಸೋಂಕಿತ ವ್ಯಕ್ತಿಯ ಸಂಬಂಧಿ ಮನೆಗೆ ಸ್ಯಾನಿಟೈಸ್ ಮಾಡಲಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.