ಚಿಕ್ಕಮಗಳೂರು : ಹಿಂದೂ ಕುಂಭಾಭಿಷೇಕಕ್ಕೆ ಮಸೀದಿಯಿಂದ ಶುಭ ಹಾರೈಕೆ ಸಲ್ಲಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಹಿಂದೂಗಳ ಪೂಜಾ ಕಾರ್ಯಕ್ಕೆ ಶುಭಕೋರಿ ಸೌಹಾರ್ದತೆಯನ್ನು ಮುಸ್ಲಿಂ ಬಾಂಧವರು ತೋರಿಸಿದ್ದಾರೆ. ಮಸೀದಿ ಮುಂದೆ ಫ್ಲೆಕ್ಸ್ ಹಾಕಿ ಮಹಾಕುಂಭಾಭಿಷೇಕಕ್ಕೆ ಶುಭ ಹಾರೈಕೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಿಂದ ಫ್ಲೆಕ್ಸ್ ಹಾಕಲಾಗಿದೆ. ಹರಿಹರಪುರದಲ್ಲಿ ನಡೆಯುತ್ತಿರುವ ಆದಿ ಶಂಕರಾಚಾರ್ಯ ಮಹಾ ಕುಂಬಾಭಿಷೇಕಕ್ಕೆ ಈ ಶುಭಾಶಯ ಸಲ್ಲಿಸಲಾಗಿದೆ.