ಚಿಕ್ಕಮಗಳೂರು:ಹೀಗೆ ಗಣಪತಿ ವಂದಿಸುತ್ತಿರುವ ಮಹಿಳೆಯ ಹೆಸರು ಜುಬೇದಾ. ಎನ್.ಆರ್.ಪುರ ತಾಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ. ತಾಲೂಕಿನ ರಾಜೀವ್ ನಗರದ ಗಣಪತಿ ಸೇವಾ ಸಮಿತಿಗೆ ಕಳೆದ 13 ವರ್ಷಗಳಿಂದಲೂ ಇವರೇ ಅಧ್ಯಕ್ಷರು. ಇವರದ್ದೇ ಅಧ್ಯಕ್ಷತೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
"ನಮ್ಮ ಮನೆಯವರು ನಮಗೆ ಧರ್ಮದ ಕಟ್ಟುಪಾಡುಗಳನ್ನು ತುಂಬಿಲ್ಲ. ನಾವೂ ಯುವಜನತೆಗೆ ಧರ್ಮದ ಕಟ್ಟುಪಾಡುಗಳನ್ನು ತುಂಬುವುದು ಬೇಡ. ಜಾತಿ-ಧರ್ಮ-ಸಂಪ್ರದಾಯ ಮನೆಗಳಲ್ಲಿರಲಿ. ದೇಶದ ಅಭಿವೃದ್ಧಿ, ಸಮಾಜದ ಶಾಂತಿ-ಸಾಮರಸ್ಯಕ್ಕೆ ಜಾತಿ-ಧರ್ಮಗಳ ಕಟ್ಟುಪಾಡುಗಳು ಅಡ್ಡಿಯಾಗಬಾರದು" ಎಂದು ಜುಬೇದಾ ಹೇಳಿದರು.