ಕರ್ನಾಟಕ

karnataka

ETV Bharat / state

ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಗಲಾಟೆ: ಡ್ರ್ಯಾಗರ್​​ನಿಂದ ಇರಿದು ಯುವಕನ ಹತ್ಯೆ - ಚಿಕ್ಕಮಗಳೂರಿನಲ್ಲಿ ಯುವಕನ ಹತ್ಯೆ

ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಗಲಾಟೆ ನಡೆದು, ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

Murder of young man in chikmagalur
ಧ್ರುವರಾಜ್ ಅರಸ್

By

Published : Apr 5, 2022, 9:03 AM IST

ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆ ನಡೆದು, ಯುವಕನೋರ್ವ ಕೊಲೆಗೀಡಾದ ಘಟನೆ ಚಿಕ್ಕಮಗಳೂರು ನಗರದ ಕೋಟೆ ಟ್ಯಾಂಕ್ ಬಳಿ ನಡೆದಿದೆ. ಗವನಹಳ್ಳಿ ಮೂಲದ ಧ್ರುವರಾಜ್ ಅರಸ್ (23) ಮೃತ ಯುವಕ.

ಡ್ರ್ಯಾಗರ್ ಮೂಲಕ ಇರಿದು ಕೊಲೆ ಮಾಡಲಾಗಿದ್ದು, ಆರೋಪಿ ವಸ್ತಾರೆಯ ಪ್ರಮೋದ್ ತಲೆಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕ್ರಿಕೆಟ್ ಬೆಟ್ಟಿಂಗ್ ಮೂಲ ಕಾರಣ ಎನ್ನಲಾಗಿದೆ.

ಹಣದ ವಿಷಯವಾಗಿ ಮಾತುಕತೆ ನಡೆಸಲು ಯುವಕನನ್ನು ನಗರದ ಕೋಟೆ ಟ್ಯಾಂಕ್ ಬಳಿ ಕರೆದುಕೊಂಡು ಹೋಗಿ ಹಣ ವಸೂಲಿಗೆ ಮುಂದಾಗಿದ್ದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕೊರಿಯರ್​ನಲ್ಲಿ ಶಸ್ತ್ರಾಸ್ತ್ರ ಸಾಗಣೆ.. ಆರೋಪಿಗಳ ಬಂಧನ

ABOUT THE AUTHOR

...view details