ಕರ್ನಾಟಕ

karnataka

ETV Bharat / state

ಆಸ್ತಿಗಾಗಿ ಕಿತ್ತಾಟ: ಚಿಕ್ಕಮಗಳೂರಿನಲ್ಲಿ ಅಣ್ಣನ ಮೇಲೆ ಗುಂಡು ಹಾರಿಸಿ ಕೊಂದ ತಮ್ಮ! - ಚಿಕ್ಕಮಗಳೂರಿನಲ್ಲಿ ಅಣ್ಣನನ್ನು ಕೊಲೆ ಮಾಡಿದ ತಮ್ಮ

ಆಸ್ತಿ ವಿಚಾರವಾಗಿ ಸ್ವಂತ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇಗು ಗ್ರಾಮದಲ್ಲಿ ನಡೆದಿದೆ.

murder in chikkamagaluru
ಚಿಕ್ಕಮಗಳೂರಿನಲ್ಲಿ ತಮ್ಮನಿಂದ ಅಣ್ಣನ ಮೇಲೆ ಶೂಟೌಟ್

By

Published : Apr 28, 2020, 2:39 PM IST

ಚಿಕ್ಕಮಗಳೂರು: ಕೊರೊನಾ ಭೀತಿ ಹಾಗೂ ಲಾಕ್​​​​​ಡೌನ್ ನಡುವೆಯೂ ಅಣ್ಣ-ತಮ್ಮಂದಿರ ನಡುವೆ ಆಸ್ತಿಗಾಗಿ ಗಲಾಟೆ ನಡೆದಿದ್ದು, ಘಟನೆಯಲ್ಲಿ ಅಣ್ಣ ಸಾವಿಗೀಡಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚೇಗು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಮ್ಮ ಅಣ್ಣನ ಮೇಲೆ ಶೂಟೌಟ್ ಮಾಡಿದ್ದಾನೆ.

ಮಂಜಯ್ಯ (60) ಮೃತ ದುರ್ದೈವಿಯಾಗಿದ್ದು, ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಲಕ್ಷ್ಮಣನನ್ನು ಬಂಧಿಸಿದ್ದಾರೆ. ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details