ಚಿಕ್ಕಮಗಳೂರು:ಲಾಕ್‌ಡೌನ್ ಪರಿಣಾಮಬಸ್ ಸಂಚಾರವಿಲ್ಲದ ಕಾರಣ ತಮ್ಮ ಸ್ಥಳಗಳಿಗೆ ಹೋಗಲಾಗದೇ ಸಂಕಷ್ಟದಲ್ಲಿದ್ದ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ನೆರವಾಗಿದ್ದಾರೆ.
ತಮ್ಮೂರುಗಳಿಗೆ ತೆರಳಲು ಸಾಧ್ಯವಾಗದೆ ಕಷ್ಟದಲ್ಲಿದ್ದವರಿಗೆ ಮೂಡಿಗೆರೆ ಶಾಸಕರ ನೆರವು - ಮೂಡಿಗೆರೆ ಶಾಸಕರ ನೆರವು
ಬಸ್ ಸಂಚಾರವಿಲ್ಲದೆ ತಮ್ಮೂರುಗಳಿಗೆ ಹೋಗಲಾಗದೇ ಸಂಕಷ್ಟದಲ್ಲಿದ್ದ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ನೆರವಾಗಿದ್ದಾರೆ.
![ತಮ್ಮೂರುಗಳಿಗೆ ತೆರಳಲು ಸಾಧ್ಯವಾಗದೆ ಕಷ್ಟದಲ್ಲಿದ್ದವರಿಗೆ ಮೂಡಿಗೆರೆ ಶಾಸಕರ ನೆರವು mudigere mla help to louck down suffering peoples](https://etvbharatimages.akamaized.net/etvbharat/prod-images/768-512-7129449-1048-7129449-1589027549750.jpg)
ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದವರಿಗೆ ಮೂಡಿಗೆರೆ ಶಾಸಕರ ನೆರವು..!
ಇಂದು ಮೂಡಿಗೆರೆ ತಾಲೂಕಿನಲ್ಲಿ ಶಾಸಕ ಎಂ. ಪಿ. ಕುಮಾರಸ್ವಾಮಿ ಎರಡು ಬಸ್‌ಗಳ ವ್ಯವಸ್ಥೆ ಕಲ್ಪಿಸುವ ಮೂಲಕ ಸುಮಾರು 66 ಜನ ಉದ್ಯೋಗಿಗಳು ಹಾಗೂ ಕಾರ್ಮಿಕರನ್ನು ಮೂಡಿಗೆರೆಯಿಂದ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಈ ವೇಳೆ ಪ್ರಯಾಣಿಕರಿಂದ 700 ರೂ. ಸಂಗ್ರಹಿಸಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಆರೋಗ್ಯ ತಪಾಸಣೆ, ಮಾಸ್ಕ್, ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಂಡೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇದರ ಉಪಯೋಗವನ್ನು ನೂರಾರು ಜನರು ಬಳಸಿಕೊಳ್ಳುತ್ತಿದ್ದಾರೆ.