ಕರ್ನಾಟಕ

karnataka

ETV Bharat / state

ಮೂಡಿಗೆರೆಯ ತಾಲೂಕಾಸ್ಪತ್ರೆ ಕಾರಿಡಾರ್​ನಲ್ಲೇ ಸಿಬ್ಬಂದಿಯಿಂದ ಬೈಕ್​​ ಪಾರ್ಕಿಂಗ್​​​? - ಮೂಡಿಗೆರೆ ತಾಲೂಕು ಸರ್ಕಾರಿ ಆಸ್ಪತ್ರೆ

ಮೂಡಿಗೆರೆಯ ಮುಖ್ಯ ರಸ್ತೆಯಲ್ಲಿರುವ ತಾಲೂಕು ಆಸ್ವತ್ರೆಯ ಸಿಬ್ಬಂದಿ ನೈಟ್​ ಶಿಫ್ಟ್​ನಲ್ಲಿ​ ಕೆಲಸಕ್ಕೆ ಬಂದಾಗ ತಮ್ಮ ಬೈಕ್​ಗಳನ್ನು ನೇರವಾಗಿ ಆಸ್ಪತ್ರೆಯ ಒಳಗಡೆ ತೆಗೆದುಕೊಂಡು ಹೋಗಿ ನಿಲುಗಡೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೈಕ್​ ಪಾರ್ಕಿಂಗ್​

By

Published : Oct 29, 2019, 8:41 PM IST

ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನೈಟ್​ ಶಿಫ್ಟ್​ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮೇಲೆ ಬೈಕ್ ಪಾರ್ಕಿಂಗ್​ನ ಗಂಭೀರ ಆರೋಪ ಕೇಳಿ ಬಂದಿದೆ.

ಆಸ್ಪತ್ರೆಯ ಕಾರಿಡಾರ್​ನಲ್ಲೇ ಸಿಬ್ಬಂದಿಯ ಬೈಕ್​ ಪಾರ್ಕಿಂಗ್?

ಮೂಡಿಗೆರೆಯ ಮುಖ್ಯ ರಸ್ತೆಯಲ್ಲಿರುವ ತಾಲೂಕು ಆಸ್ವತ್ರೆಯ ಸಿಬ್ಬಂದಿ ನೈಟ್​ ಶಿಫ್ಟ್​ನಲ್ಲಿ ಕೆಲಸಕ್ಕೆ ಬಂದಾಗ ತಮ್ಮ ಬೈಕ್​ಗಳನ್ನು ನೇರವಾಗಿ ಆಸ್ಪತ್ರೆಯ ಒಳಗಡೆ ತೆಗೆದುಕೊಂಡು ಹೋಗಿ ನಿಲುಗಡೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಆಸ್ಪತ್ರೆಯ ಹೊರ ಭಾಗದಲ್ಲಿ 3ರಿಂದ 5 ಎಕರೆಯವರೆಗೂ ವಿಶಾಲವಾದ ಜಾಗವಿದ್ದು, ಎಲ್ಲಿ ಬೇಕಾದರೂ ತಮ್ಮ ವಾಹನ ಪಾರ್ಕಿಂಗ್ ಮಾಡಬಹುದು. ಆದರೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಆಸ್ಪತ್ರೆಯ ಕಾರಿಡಾರ್​ನಲ್ಲಿಯೇ ತಮ್ಮ ಬೈಕ್​ಗಳನ್ನು ಪಾರ್ಕಿಂಗ್ ಮಾಡುತ್ತಿರೋದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದರಿಂದ ಅಲ್ಲಿ ಓಡಾಡುವ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ಒಳಗಡೆ ಬೈಕ್ ನಿಲ್ಲಿಸುವಂತಹ ಸಿಬ್ಬಂದಿ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details