ಚಿಕ್ಕಮಗಳೂರು: ನಗರದ ಉಪ್ಪಳ್ಳಿಯ ಮಸೀದಿಯ ಬಳಿ ಪೌರಕಾರ್ಮಿಕ ಮಂಜುನಾಥ್ ಮತ್ತು ಗೀತಮ್ಮ ಎಂಬುವವರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ ನಡೆದಿತ್ತು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯೋಗಕ್ಷೇಮ ವಿಚಾರಿಸಲು ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಇಡೀ ವಿಶ್ವವೇ ಕೊರೊನಾ ವೈರಸ್ನಿಂದ ಬಳಲುತ್ತಿದೆ. ಈ ಹಿನ್ನೆಲೆ ಕೇಂದ್ರ, ರಾಜ್ಯ ಸರ್ಕಾರಗಳು ಹಗಲು-ರಾತ್ರಿ ಕೆಲಸ ಮಾಡುತ್ತಿವೆ. ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಪೌರಕಾರ್ಮಿಕರಿಗೆ ಪ್ರಧಾನಿ ಮೋದಿ ಕೊರೊನಾ ವಾರಿಯರ್ಸ್ ಎಂಬ ಹೆಸರು ಇಟ್ಟಿದ್ದಾರೆ. ನಮ್ಮ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಯುತ್ತಿದೆ. ಬೆಂಗಳೂರಿನ ಸಿದ್ದಿಕಿ ಲೇಔಟ್ನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯಿತು. ಮೊನ್ನೆ ರಾತ್ರಿ ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಯಿತು. ಈಗ ಚಿಕ್ಕಮಗಳೂರಿನ ಸರತಿ ಪ್ರಾರಂಭವಾಗಿದ್ದು, ಉಪ್ಪಳ್ಳಿಯ ಮಸೀದಿ ಬಳಿ ಬೆಳಿಗ್ಗೆ ಕ್ಲೀನಿಂಗ್ಗೆ ಹೋದ ಸಮಯದಲ್ಲಿ ಪೌರಕಾರ್ಮಿಕ ಮಂಜುನಾಥ್ ಮತ್ತ ಗೀತಮ್ಮ ಎಂಬುವವರ ಮೇಲೆ ಮತಾಂಧ ಶಕ್ತಿಗಳು, ದೇಶದ್ರೋಹಿಗಳು ಹಲ್ಲೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈಗ ಅವರ ಕುಟುಂಬ ಕಣ್ಣೀರು ಹಾಕುವಂತಾಗಿದೆ. ಅವರ ಎಲ್ಲರ ರಕ್ಷಣೆ ಸರ್ಕಾರದ ಹೊಣೆಯಾಗಿದ್ದು, ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಬೇಕು. ಇವರು ಐದು ವರ್ಷಗಳ ಕಾಲ ಜೈಲಿನಿಂದ ವಾಪಸ್ ಬರಬಾರದು. ದೇಶ ಕಾಯುವಂತ ವ್ಯಕ್ತಿಗಳ ಮೇಲೆ ಹಲ್ಲೆ ಮಾಡುತ್ತಿರುವ ವ್ಯಕ್ತಿಗಳ ಪರ ಸರ್ಕಾರ ಮೃದು ಧೋರಣೆ ತೆಗೆದುಕೊಳ್ಳಬಾರದು. ನಿನ್ನೆ ಕ್ಯಾಬಿನೆಟ್ ಮೀಟಿಂಗ್ನಲ್ಲಿ ತೆಗೆದುಕೊಂಡ ನಿರ್ಧಾರದಂತೆ ಹಲ್ಲೆ ಮಾಡಿದ ವ್ಯಕ್ತಿಯ ಆಸ್ತಿ-ಪಾಸ್ತಿಯನ್ನು ವಶಪಡಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ಇದು ಜಿಹಾದ್, ಭಯೋತ್ಪಾದನೆಯ ಮುಂದುವರೆದ ಭಾಗ: