ಕರ್ನಾಟಕ

karnataka

ETV Bharat / state

ದೇಶದ ಕೈ ನಾಯಕರೆಲ್ಲ ಪಕೋಡಾ ಮಾರಲಿ.. ದೇವರಲ್ಲಿ ಇದು ನನ್ನ ಪ್ರಾರ್ಥನೆ.. ಸಂಸದೆ ಕರಂದ್ಲಾಜೆ - ಕಾರ್ಮಿಕ ಸಂಘಟನೆಗಳಿಂದ ನಾಳೆ ಭಾರತ್ ಬಂದ್​ಗೆ ಕರೆ

ದೇಶದ ಕಾರ್ಖಾನೆಗಳು ಬಂದ್ ಆಗುವ ಹಂತ ತಲುಪಲು ಇವರೇ ಕಾರಣ. ಇವರಿಂದ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸ್ಥಗಿತ ಮಾಡೋದು ಇವರ ಉದ್ದೇಶ. ಇವರಿಗೆ ಸಾರ್ವಜನಿಕರು ಬೆಂಬಲ ಕೊಡಬಾರದು ಎಂದರು.

shobha-karandlaje
ಸಂಸದೆ ಶೋಭಾ ಕರಂದ್ಲಾಜೆ

By

Published : Jan 7, 2020, 5:09 PM IST

ಚಿಕ್ಕಮಗಳೂರು:ನಾಳೆ ಭಾರತ್ ಬಂದ್​ಗೆ ಕರೆ ನೀಡಿರುವುದು ಅರ್ಥ ಹೀನ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕರ ಸಂಬಳ ಹೆಚ್ಚಳವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟ ಮಾಡೋದು ಕಾರ್ಮಿಕರಿಗೆ ತೊಂದರೆ ಮಾಡೋದೇ ತುಕ್ಡೆ ತುಕ್ಡೆ ಗ್ಯಾಂಗ್‌ನ ಕಾಯಕ. ದೇಶದಲ್ಲಿ ಅಸ್ತಿತ್ವದಲ್ಲಿಲ್ಲದ ಸಿಪಿಐ-ಸಿಪಿಎಂನಿಂದ ಬಂದ್​ಗೆ ಕರೆ ನೀಡಲಾಗಿದೆ. ಕಾರ್ಮಿಕರಿಗೆ ಇವರಷ್ಟು ಅನ್ಯಾಯ ಬೇರೆ ಯಾರೂ ಮಾಡಿಲ್ಲ ಎಂದು ಆರೋಪಿಸಿದರು.

ದೇಶದ ಕಾರ್ಖಾನೆಗಳು ಬಂದ್ ಆಗುವ ಹಂತ ತಲುಪಲು ಇವರೇ ಕಾರಣ. ಇವರಿಂದ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸ್ಥಗಿತ ಮಾಡೋದು ಇವರ ಉದ್ದೇಶ. ಇವರಿಗೆ ಸಾರ್ವಜನಿಕರು ಬೆಂಬಲ ಕೊಡಬಾರದು ಎಂದರು.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ..

ಜೆಎನ್‍ಯು ವಿವಿ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿ, ಯಾವ ದಳದವರು ಹಲ್ಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾರೋ ಗೊತ್ತಿಲ್ಲ. ದೇಶದ್ರೋಹಿ ಚಟುವಟಿಕೆ ಹಾಗೂ ಪಾಕ್‌ನ ಜಿಂದಾಬಾದ್ ಘೋಷಣೆ ಅಲ್ಲಿಂದ ಕೇಳುತ್ತಿವೆ. ಅಧ್ಯಯನ ಮುಗಿಸಿ 5 ವರ್ಷದಿಂದ ಅಲ್ಲೇ ಇದ್ದಾರೆಂಬ ಮಾಹಿತಿ ಇದೆ. ಜೆಎನ್‍ಯುನಲ್ಲಿರೋ ದೇಶದ್ರೋಹಿಗಳನ್ನು ದೆಹಲಿ ಸರ್ಕಾರ ಹೊರ ಹಾಕಬೇಕು ಎಂದರು. ಅವಧಿ ಮೀರಿ ಹಾಸ್ಟೆಲ್‍ನಲ್ಲಿ ಇರುವವರನ್ನು ಹೊರ ಹಾಕಬೇಕು ಎಂದರು.

ದೇಶದಲ್ಲಿ ಕಾಂಗ್ರೆಸ್​ನವರು ನಿರುದ್ಯೋಗಿಗಳಾಗಿದ್ದಾರೆ. ಇನ್ಮೇಲೆ ಎಲ್ಲಾ ಕಾಂಗ್ರೆಸ್​​ನವರು ಪಕೋಡ ಮಾರಲಿ. ಹಾಗೆಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು. ಇವತ್ತು ಸಂಸದೆಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಮಹಿಳಾ ಕೈ ಕಾರ್ಯಕರ್ತೆಯರು ಪಕೋಡಾ ಮಾರಿ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಕರಂದ್ಲಾಜೆ ವ್ಯಂಗ್ಯವಾಡಿದರು.

ABOUT THE AUTHOR

...view details