ಚಿಕ್ಕಮಗಳೂರು : ಕಳೆದ ಒಂದು ವರ್ಷದಿಂದ ಕುಮಾರಸ್ವಾಮಿ ಸರ್ಕಾರ ಮಾಡಿರುವ ಕೆಲಸವನ್ನು ರಾಜ್ಯದ ಜನರು ಗಮನಿಸಿದ್ದಾರೆ. ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ, ಯಾವುದನ್ನೂ ಅವರು ಈಡೇರಿಸಿಲ್ಲ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ವಿಜಯಪುರ, ಬಾಗಲಕೋಟೆಗೆ ಬೆಳಗಾವಿಗೆ ಬಂದು ಸರ್ವೇಕ್ಷಣ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜ್ಞೆ ಹೇಳಿದ್ದಾರೆ.
ಸಿಎಂಗೆ ಸಲಹೆ ನೀಡುವ ಅವಶ್ಯಕತೆಯಿಲ್ಲ: ಸಂಸದೆ ಶೋಭಾ ಕರಂದ್ಲಾಜೆ - Former Chief Minister HD Kumaraswamy
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ನೀಡುವ ಅವಶ್ಯಕತೆಯಿಲ್ಲ. ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಂಡು ಹತಾಶೆಯಾಗಿದೆ ಅದಕ್ಕೆ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೆಚ್ಡಿಕೆಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಅವರು ಮಂತ್ರಿಯಾದಾಗ ಬರ ಪರಿಶೀಲನೆಗೆ ಹೋಗಿಲ್ಲ. ಆದರೆ, ಯಡಿಯೂರಪ್ಪ ಹೋಗಿದ್ದಾರೆ, ರಾಜ್ಯದಲ್ಲಿ ಎಲ್ಲೇ ಸಮಸ್ಯೆ, ಅತಿವೃಷ್ಟಿ ಅನಾವೃಷ್ಟಿಯಾದಾಗಲೂ ಬಿಎಸ್ವೈ ಹಾಗೂ ಅವರ ತಂಡ ಭೇಟಿ ನೀಡಿದೆ. ಅವರಿಗೆ ಯಾರ ಸಲಹೆ ಅವಶ್ಯಕತೆ ಬೇಕಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂಬ ಸಲಹೆ ನೀಡುವ ಅವಶ್ಯಕತೆಯಿಲ್ಲ. ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡು ಹತಾಶೆಯಿಂದ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.