ಚಿಕ್ಕಮಗಳೂರು:ಮಗನ ಪಬ್ ಜಿ ಹುಚ್ಚಿಗೆ ಅಮ್ಮ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ನಲ್ಲಿ ನಡೆದಿದೆ. ಮೈಮುನಾ (40) ಮೃತ ದುರ್ದೈವಿ ತಾಯಿ ಎಂಬುದಾಗಿ ತಿಳಿದು ಬಂದಿದೆ.
ಪಬ್ ಜಿ ಆಡುತ್ತಿದ್ದ ಮಗನ ಜೊತೆ ಅಪ್ಪ ಜಗಳ ಆಡಿದ್ದು, ಪ್ರತಿಯಾಗಿ ಮಗನೂ ಅಪ್ಪನೊಂದಿಗೆ ಜಗಳಕ್ಕಿಳಿದಿದ್ದಾನೆ. ಕೋಪದಲ್ಲಿ ನಿನ್ನ ಸಾಯಿಸುತ್ತೇನೆ ಎಂದು ಮಗನಿಗೆ ವಿರುದ್ದವಾಗಿ ತೋಟದ ಕೋವಿಯನ್ನು ಅಪ್ಪ ಹಿಡಿದಿದ್ದಾರೆ. ಮಗನಿಗೆ ಹೊಡೆಯುತ್ತಾರೆಂದು ಅಮ್ಮ ಅಡ್ಡ ಬಂದಿದ್ದಾರೆ. ಕುಡಿದ ಮತ್ತಿನಲ್ಲಿ ಅಪ್ಪ ಗುಂಡು ಹಾರಿಸಿದ್ದು, 40 ವರ್ಷದ ಮೈಮುನಾ ಮೃತಪಟ್ಟಿದ್ದಾರೆ.