ಚಿಕ್ಕಮಗಳೂರು: ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ತಾಲ್ಲೂಕಿನ ಬಾಳೂರು ಹೊರಟ್ಟಿ ಗ್ರಾಮದಲ್ಲಿ ಬೆಟ್ಟ ಕುಸಿದು ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಟ್ಟ ಕುಸಿದು ತಾಯಿ-ಮಗ ನಿಧನ... 3 ದಿನಗಳವಾದ್ರೂ ನಡೆಯದ ಅಂತ್ಯಕ್ರಿಯೆ! - ಮೂಡಿಗರೆ ತಾಲ್ಲೂಕಿನ ಬಾಳೂರು ಹೊರಟ್ಟಿ ಗ್ರಾಮ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ತಾಲ್ಲೂಕಿನ ಬಾಳೂರು ಹೊರಟ್ಟಿ ಗ್ರಾಮದಲ್ಲಿ ಬೆಟ್ಟ ಕುಸಿದು ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಆದ್ರೆ ಗುಡ್ಡ ಕುಸಿದಿರುವುದರಿಂದ ಅಂತ್ಯಕ್ರಿಯೆ ವಿಳಂಬವಾಗಿದೆ.
ಬೆಟ್ಟ ಕುಸಿದು ತಾಯಿ ಮತ್ತು ಮಗ ನಿಧನ : ಅಂತ್ಯಕ್ರಿಯೆಗೂ ವಿಳಂಬ
ಮೃತಪಟ್ಟವರನ್ನು ಶೇಷಮ್ಮ(60) ಮತ್ತು ಅವಳ ಮಗ ಸತೀಶ್ (42) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ದೊರಕಿದ ಅವರ ಮೃತ ದೇಹಗಳ ಮರಣೋತ್ತರ ಪರೀಕ್ಷೆ ಕೂಡ ಮುಗಿದಿದೆ. ಆದರೆ, ಅವರಿಬ್ಬರ ಅಂತ್ಯಕ್ರಿಯೆ ಮಾತ್ರ ಇನ್ನೂ ನಡೆದಿಲ್ಲ.
ಹೌದು, ಬೆಟ್ಟದ ಕುಸಿತದಿಂದಾಗಿ ಅವರ ಹಳ್ಳಿಗೆ ಹೋಗುವ ದಾರಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ಮೃತ ದೇಹಗಳಿನ್ನೂ ಆಸ್ಪತ್ರೆಯಲ್ಲೇ ಇವೆ. ಅವರ ಸಂಬಂಧಿಕರು ರಸ್ತೆಯ ತೆರವಿಗಾಗಿ ಕಾಯುತ್ತಿದ್ದಾರೆ.