ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಮಗಳನ್ನು ರಕ್ಷಿಸಲು ಹೋಗಿ ತಾಯಿಯೂ ಕೆರೆಯಲ್ಲಿ ಮುಳುಗಿ ಸಾವು - ಚಿಕ್ಕಮಗಳೂರು ತಾಲೂಕಿನ ಬೆಳವಾಡಿ

ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಸಮೀಪದ ವಡ್ಡರಹಳ್ಳಿ ಕೆರೆಯಲ್ಲಿ ಸಿಲುಕಿದ ಮಗಳನ್ನು ರಕ್ಷಿಸಲು ಹೋಗಿ ತಾಯಿಯೂ ಮೃತಪಟ್ಟಿರುವ ಘಟನೆ ನಡೆದಿದೆ.

ವಡ್ಡರಹಳ್ಳಿ ಕೆರೆ
ವಡ್ಡರಹಳ್ಳಿ ಕೆರೆ

By

Published : Dec 20, 2022, 7:06 PM IST

Updated : Dec 20, 2022, 7:33 PM IST

ಚಿಕ್ಕಮಗಳೂರು:ಕೆರೆಯಲ್ಲಿ ಮುಳುಗಿ ತಾಯಿ ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಶೋಭ (40) ವರ್ಷ (8) ಮೃತರು ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಸಮೀಪದ ವಡ್ಡರಹಳ್ಳಿ ಕೆರೆಯಲ್ಲಿ ಈ ಘಟನೆ ನಡೆದಿದೆ. ಕೆರೆ ದಾಟುವಾಗ ನೀರಿನಲ್ಲಿ ಮಗಳು ಸಿಲುಕಿದಾಗ, ಮಗಳನ್ನು ರಕ್ಷಿಸಲು ಹೋದ ತಾಯಿಯೂ ಸಾವನ್ನಪ್ಪಿದ್ದಾರೆ.

ಮೃತ ಶೋಭಾ ಜೊತೆಯಲ್ಲಿದ್ದ ಮಗ ಚೇತನ್ ಪಾರು ಆಗಿದ್ದು, ದನ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ನೀರಿನ ಪ್ರಮಾಣ ಕಡಿಮೆ ಇರುವ ಕಡೆ ತಾಯಿ, ಮಗಳು, ಮಗ ಕೆರೆ ದಾಟುತ್ತಿದ್ದರು. ಮಗಳು ನೀರಿನ ಪ್ರಮಾಣ ಹೆಚ್ಚಿರುವ ಕಡೆ ಹೋಗಿ ಸಿಲುಕಿಕೊಂಡ ಹಿನ್ನೆಲೆ ತಾಯಿ ರಕ್ಷಣೆಗೆ ತೆರಳಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಓದಿ:ವಿಜಯನಗರ: ಈಜಲು ತೆರಳಿದ್ದ ಬಾಲಕಿ ಕೆರೆಯಲ್ಲಿ ಮುಳುಗಿ ಸಾವು

Last Updated : Dec 20, 2022, 7:33 PM IST

ABOUT THE AUTHOR

...view details