ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಕಾಫಿ ಎಸ್ಟೇಟ್ವೊಂದರಲ್ಲಿ 50ಕ್ಕೂ ಹೆಚ್ಚು ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಮಗಳೂರು ಕಾಫಿ ಎಸ್ಟೇಟ್ನಲ್ಲಿ 50ಕ್ಕೂ ಹೆಚ್ಚು ಕಾಡುಕೋಣಗಳು ಪ್ರತ್ಯಕ್ಷ! - bison
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೂತನಕಾಡು ಗ್ರಾಮದಲ್ಲಿ 50ಕ್ಕೂ ಹೆಚ್ಚು ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕಾಫಿ ಎಸ್ಟೇಟ್ನಲ್ಲಿ ಕಾಣಿಸಿಕೊಂಡ ಕಾಡುಕೋಣಗಳು
ಮೂಡಿಗೆರೆ ತಾಲೂಕಿನ ಭೂತನಕಾಡುವಿನ ಸಿದ್ದಗಂಗಾ ಕಾಫಿ ಎಸ್ಟೇಟ್ ಬಳಿ ಸುಮಾರು 50ಕ್ಕೂ ಅಧಿಕ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದ್ದು, ಪರಿಣಾಮ ಕಾರ್ಮಿಕರು ಆತಂಕಗೊಂಡು ಕಾಫಿ ತೋಟದಿಂದ ಕಾಲ್ಕಿತ್ತಿದ್ದಾರೆ.
ಕಾಡುಕೋಣಗಳ ಹಾವಳಿಯಿಂದ ಕಾಫಿ, ಮೆಣಸು ಬೆಳೆಗಳು ಹಾನಿಯಾಗಿವೆ. ತೋಟದ ಮಾಲೀಕರು ಪ್ರಾಣಿಗಳನ್ನು ಓಡಿಸಲು ಶಬ್ದ ಮಾಡಿದರು ಕೂಡ ಅದಕ್ಕೆ ಕ್ಯಾರೇ ಎನ್ನದೆ ರಸ್ತೆಗೆ ಅಡ್ಡಲಾಗಿ ನಿಲ್ಲುತ್ತಿವೆ.