ಕರ್ನಾಟಕ

karnataka

ETV Bharat / state

ಶಿವರಾತ್ರಿ ಪಾದಯಾತ್ರೆ: ಚಿಕ್ಕಮಗಳೂರಿನಲ್ಲಿ 30ಕ್ಕೂ ಹೆಚ್ಚು ಜಾನುವಾರುಗಳ ಸಾವು - ಚಿಕ್ಕಮಗಳೂರಿನಲ್ಲಿ 30ಕ್ಕೂ ಹೆಚ್ಚು ಜಾನುವಾರು ಸಾವು

ಈ ಬಾರಿಯ ಶಿವರಾತ್ರಿ ಪಾದಯಾತ್ರೆ ಜಾನುವಾರುಗಳಿಗೆ ಆಪತ್ತು ತಂದಿದ್ದು, ಪಾದಯಾತ್ರಿಗಳು ತಿಂದು ಬಿಸಾಕಿದ ಆಹಾರ, ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ಚಿಕ್ಕಮಗಳೂರಿನಲ್ಲಿ 30 ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿವೆ.

ಚಿಕ್ಕಮಗಳೂರಿನಲ್ಲಿ 30ಕ್ಕೂ ಹೆಚ್ಚು ಜಾನುವಾರುಗಳು ಸಾವು
ಚಿಕ್ಕಮಗಳೂರಿನಲ್ಲಿ 30ಕ್ಕೂ ಹೆಚ್ಚು ಜಾನುವಾರುಗಳು ಸಾವು

By

Published : Mar 3, 2022, 1:01 PM IST

ಚಿಕ್ಕಮಗಳೂರು: ಶಿವರಾತ್ರಿ ಹಿನ್ನೆಲೆ ಕಳೆದ ಒಂದು ವಾರದಿಂದ ಮೂಡಿಗೆರೆ ಮುಖಾಂತರ ಧರ್ಮಸ್ಥಳಕ್ಕೆ ಸಾವಿರಾರು ಭಕ್ತಾದಿಗಳು ಕಾಲ್ನಡಿಗೆಯಲ್ಲಿ ತೆರಳಿದ್ದರು. ಆದರೆ, ಮಾರ್ಗ ಮಧ್ಯೆ ಕೆಲ ಪಾದಯಾತ್ರಿಗಳು ಮಾಡಿದ ಯಡವಟ್ಟಿಗೆ 30 ಕ್ಕೂ ಅಧಿಕ ಮೂಕ ಪ್ರಾಣಿಗಳು ಬಲಿಯಾಗಿವೆ.

ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸುವುದು ಸಂಪ್ರದಾಯ. ಈ ವರ್ಷ ಸಹ ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳಿಂದ ಭಕ್ತರು ಬಂದಿದ್ದರು. ಈ ವೇಳೆ, ಪಾದಯಾತ್ರಿಗಳು ತಿಂದು ಬಿಸಾಕಿದ ಆಹಾರ, ಪ್ಲಾಸ್ಟಿಕ್ ವಸ್ತುಗಳನ್ನು ತಿಂದು 30 ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಪಾದಯಾತ್ರಿಗಳು ತಿಂದು ಬಿಸಾಕಿದ ಆಹಾರ, ಪ್ಲಾಸ್ಟಿಕ್ ತಿಂದು ಜಾನುವಾರುಗಳು ಸಾವು

ಕಳೆದ ಮೂರು ದಿನಗಳಲ್ಲಿ ಮೂಡಿಗೆರೆ ತಾಲೂಕಿನ ಗೋಣಿಬೀಡು, ಜನ್ನಾಪುರ, ಬಣಕಲ್, ಕೊಟ್ಟಿಗೆಹಾರ ಸೇರಿದಂತೆ ಹಲವೆಡೆ 30 ಕ್ಕೂ ಹೆಚ್ಚು ದನ-ಕರುಗಳ ಸಾವನ್ನಪ್ಪಿದ್ದು, ಹಸುಗಳನ್ನು ಕಳೆದುಕೊಂಡು ಗೋಣಿಬೀಡಿನ ಸಂದೀಪ್ ಹಾಗೂ ಆದರ್ಶ ಎಂಬುವರು ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ:ಅಮರಾವತಿಯೇ ಆಂಧ್ರಪ್ರದೇಶದ ರಾಜಧಾನಿ: ಹೈಕೋರ್ಟ್​

ABOUT THE AUTHOR

...view details