ಕರ್ನಾಟಕ

karnataka

ETV Bharat / state

ಪೊಲೀಸ್ ಇನ್​ಸ್ಪೆಕ್ಟರ್​ಗೆ ಅವಾಜ್​ ಹಾಕಿದ್ರಾ ಮೂಡಿಗೆರೆ ಶಾಸಕ?: ಆಡಿಯೋ ಕೇಳಿ.. - ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿ ವಿರುದ್ಧ ಕೆಟ್ಟದಾಗಿ ನಡೆದುಕೊಂಡ ಶಾಸಕ

ಶಾಸಕ ಎಂ.ಪಿ.ಕುಮಾರಸ್ವಾಮಿ ಪೊಲೀಸ್ ಇನ್​ಸ್ಪೆಕ್ಟರ್​ವೋರ್ವರಿಗೆ ಅವಾಜ್​ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ.

ಪೊಲೀಸ್ ಇನ್​ಸ್ಪೆಕ್ಟರ್​ಗೆ ಅವಾಜ್​ ಹಾಕಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ
ಪೊಲೀಸ್ ಇನ್​ಸ್ಪೆಕ್ಟರ್​ಗೆ ಅವಾಜ್​ ಹಾಕಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ

By

Published : May 6, 2022, 12:53 PM IST

Updated : May 6, 2022, 1:10 PM IST

ಚಿಕ್ಕಮಗಳೂರು: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪೊಲೀಸ್ ಇನ್​ಸ್ಪೆಕ್ಟರ್​ವೋರ್ವರಿಗೆ ಅವಾಜ್​ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ. ಹೊಸದಾಗಿ ಮಲ್ಲಂದೂರು ಠಾಣೆಯ ಚಾರ್ಜ್ ತೆಗೆದುಕೊಂಡ ರವೀಶ್​​ಗೆ ಪೋನ್​ ಮಾಡಿ ನಿಂದಿಸಿದ್ದಾರೆ ಎನ್ನಲಾಗಿದೆ.

ಯಾರನ್ನು ಕೇಳಿ ಚಾರ್ಜ್ ತೆಗೆದುಕೊಂಡೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲಿದ್ದೀಯಾ? ನಿನ್ನನ್ನು ಬೇಡ ಅಂತಾ ಹೇಳಿದ್ದೆ ತಾನೇ? ನೀನು ವಾಪಸ್ ಹೋಗು, ಠಾಣೆಯಲ್ಲಿ ಇರಬೇಡ ಎಂಬೆಲ್ಲಾ ಮಾತುಗಳು ಆಡಿಯೋದಲ್ಲಿವೆ.

ಪೊಲೀಸ್ ಇನ್​ಸ್ಪೆಕ್ಟರ್​ಗೆ ಅವಾಜ್​ ಹಾಕಿದ್ರಾ ಮೂಡಿಗೆರೆ ಶಾಸಕರು: ಆಡಿಯೋ ವೈರಲ್​ !

ಇದನ್ನೂ ಓದಿ: ದ.ಭಾರತದ ಅತೀ‌ ದೊಡ್ಡ ಎಲೆಕ್ಟ್ರಿಕ್‌ ಕಾರುಗಳ ಚಾರ್ಜಿಂಗ್ ಪಾಯಿಂಟ್ ಲೋಕಾರ್ಪಣೆ

ಗೃಹ ಸಚಿವರ ಪ್ರತಿಕ್ರಿಯೆ:ಪಿಎಸ್ಐ‌ಗೆ ಅವಾಚ್ಯವಾಗಿ ನಿಂದಿಸಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ‌ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನಮ್ಮ ಶಾಸಕರು ತಾಳ್ಮೆ ಕಳೆದುಕೊಂಡಿದ್ದಾರೆ ಅಂತ ಅನ್ಸುತ್ತೆ. ಎಂಪಿ ಕುಮಾರಸ್ವಾಮಿ ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ‌ಪಿಎಸ್ಐಗೆ ಅವಾಚ್ಯವಾಗಿ ನಿಂದನೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ನಾನು ರಿಪೋರ್ಟ್ ತರಿಸಿಕೊಳ್ಳುತ್ತೇನೆ. ಶಾಸಕರನ್ನು ಕರೆಸಿ ಮಾತನಾಡುವುದಾಗಿ ಹೇಳಿದರು.

Last Updated : May 6, 2022, 1:10 PM IST

For All Latest Updates

TAGGED:

ABOUT THE AUTHOR

...view details