ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನ ವೈರಸ್ ಭೀತಿ ಜೊತೆ ಜೊತೆಗೆ ಮಂಗನ ಕಾಯಿಲೆ ಶಂಕೆ ವ್ಯಕ್ತವಾಗುತ್ತಿದೆ.
ಚಿಕ್ಕಮಗಳೂರಿಗೆ ಕೊರೊನಾ ಜೊತೆಗೆ ಮಂಗನ ಕಾಯಿಲೆ ಭೀತಿ - Corona virus
ಚಿಕ್ಕಮಗಳೂರು ಪಾಲಿಟೆಕ್ನಿಕ್ ಕಾಲೇಜು ಬಳಿ ಒಂದು ಮಂಗ ಸತ್ತು ಬಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಚಿಕ್ಕಮಗಳೂರು - ಶಿವಮೊಗ್ಗ ಗಡಿಯಲ್ಲಿ ಕೆಎಫ್ಡಿ ವೈರಸ್ ಸದ್ದು ಮಾಡುತ್ತಿದ್ದು, ಈಗಾಗಲೇ ಏಳೆಂಟು ಜನರಲ್ಲಿ ಕೆಎಫ್ಡಿ ವೈರಸ್ ಕಾಣಿಸಿಕೊಂಡಿದೆ.
ಚಿಕ್ಕಮಗಳೂರಿಗೆ ಕೊರೊನಾ ಜೊತೆಗೆ ಮಂಗನ ಕಾಯಿಲೆ ಭೀತಿ
ಹೌದು, ಚಿಕ್ಕಮಗಳೂರು ಪಾಲಿಟೆಕ್ನಿಕ್ ಕಾಲೇಜು ಬಳಿ ಒಂದು ಮಂಗ ಸತ್ತು ಬಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಚಿಕ್ಕಮಗಳೂರು - ಶಿವಮೊಗ್ಗ ಗಡಿಯಲ್ಲಿ ಕೆಎಫ್ಡಿ ವೈರಸ್ ಸದ್ದು ಮಾಡುತ್ತಿದ್ದು, ಈಗಾಗಲೇ ಏಳೆಂಟು ಜನರಲ್ಲಿ ಕೆಎಫ್ಡಿ ವೈರಸ್ ಕಾಣಿಸಿಕೊಂಡಿದೆ.
ಈ ಹಿನ್ನೆಲೆ, ಚಿಕ್ಕಮಗಳೂರು ನಗರಕ್ಕೂ ಮಂಗನ ಖಾಯಿಲೆ ಬಂದಿದ್ಯಾ ಎಂಬ ಭೀತಿಯಲ್ಲಿ ಜನರು ಇದ್ದು, ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.