ಚಿಕ್ಕಮಗಳೂರು:ಜಿಲ್ಲೆಯ ಹೋಟೆಲ್ವೊಂದಕ್ಕೆ ಕೋತಿಯೊಂದು ದಿನಾ ಬಂದು ಟೀ ಕುಡಿದು ಹೋಗುವ ಅಭ್ಯಾಸ ಬೆಳೆಸಿಕೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ನಿಸರ್ಗ ಹೋಟೆಲ್‌ಗೆ ಪ್ರತಿನಿತ್ಯ ಬರುವ ಕೋತಿ, ಅಲ್ಲಿ ತಿಂಡಿ ತಿಂದು, ಟೀ ಕುಡಿಯುವುದನ್ನು ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಟೀ ಕುಡಿದ ತಕ್ಷಣ ಲೋಟವನ್ನು ಟೇಬಲ್ ಮೇಲಿಟ್ಟು ಈ ಮಂಗ ವಾಪಸ್ ಹೋಗುತ್ತೆ. ಕೋತಿಯ ನಡೆಗೆ ಜನರು ಅಚ್ಚರಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೋತಿಗೆ ನಿತ್ಯ ಹೋಟೆಲ್ ಸಿಬ್ಬಂದಿ ಊಟ-ತಿಂಡಿ ಹಾಗೂ ಟೀ ನೀಡುತ್ತಿದ್ದಾರೆ.
ಇದನ್ನೂ ಓದಿ:VIDEO - ದುಸ್ಸಾಹಸ ತೋರಿ ಮಾಂಜ್ರಾ ನದಿ ದಾಟಲು ಮುಂದಾದ ವ್ಯಕ್ತಿ ನೀರುಪಾಲು