ಕರ್ನಾಟಕ

karnataka

ETV Bharat / state

ಬೆಡ್ ಕೊಡಿ, ಆಕ್ಸಿಜನ್ ಕೊಡಿ, ಜನರ ಪ್ರಾಣ ಉಳಿಸಿ : ಜೆಡಿಎಸ್‌ ಎಂಎಲ್‌ಸಿ ಭೋಜೇಗೌಡ - bhojegowda outrage against government

ಸಚಿವ ಸೋಮಶೇಖರ್ ಮೃತ ಕುಟುಂಬಸ್ಥರಿಗೆ ಒಂದು ಲಕ್ಷ ಕೊಡುವುದಾಗಿ ಹೇಳುತ್ತಾರೆ. ನಿಮ್ಮ ಒಂದು ಲಕ್ಷ ಪರಿಹಾರವನ್ನು ಮಣ್ಣಿಗೆ ಬಿಸಾಕಿ, ನಿಮ್ಮ ಒಂದು ಲಕ್ಷ ಪರಿಹಾರ ಯಾರಿಗೆ ಬೇಕೆಂದು ಕಿಡಿಕಾರಿದರು..

MLC SL bhojegowda
ಎಂ.ಎಲ್.ಸಿ. ಭೋಜೇಗೌಡ

By

Published : May 8, 2021, 9:54 PM IST

ಚಿಕ್ಕಮಗಳೂರು : ಪ್ರತಿ ನಿತ್ಯ 50 ಸಾವಿರ ಸೋಂಕಿತರ ಪತ್ತೆ ಕುರಿತು ತಜ್ಞರು ವರದಿ ನೀಡಿದ್ರು. ಆದರೂ ಸರ್ಕಾರ ಯಾವುದೇ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಎಂಎಲ್‌ಸಿ ಭೋಜೇಗೌಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಡ್​​ಗಳನ್ನು ಹೆಚ್ಚಿಸಲಿಲ್ಲ, ಆಕ್ಸಿಜನ್ ಕೊರತೆ ಹೋಗಲಾಡಿಸಲಿಲ್ಲ, ಕೊರೊನಾದಿಂದ ಸರ್ಕಾರ ದುಡ್ಡಿನ ದಂಧೆ ನಡೆಸುತ್ತಿದೆ. ಜನ ಸಾಮಾನ್ಯರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ನೊಂದಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರದ ವಿರುದ್ಧ ಎಂಎಲ್‌ಸಿ ಭೋಜೇಗೌಡ ಆಕ್ರೋಶ..

ಸಚಿವ ಸೋಮಶೇಖರ್ ಮೃತ ಕುಟುಂಬಸ್ಥರಿಗೆ ಒಂದು ಲಕ್ಷ ಕೊಡುವುದಾಗಿ ಹೇಳುತ್ತಾರೆ. ನಿಮ್ಮ ಒಂದು ಲಕ್ಷ ಪರಿಹಾರವನ್ನು ಮಣ್ಣಿಗೆ ಬಿಸಾಕಿ, ನಿಮ್ಮ ಒಂದು ಲಕ್ಷ ಪರಿಹಾರ ಯಾರಿಗೆ ಬೇಕೆಂದು ಕಿಡಿಕಾರಿದರು.

ಇದನ್ನೂ ಓದಿ:ಬೀದಿಗೆ ಹಾಸಿಗೆ ತಂದು ಸರ್ಕಾರದ ವಿರುದ್ಧ ವಾಟಾಳ್ ಪ್ರತಿಭಟನೆ!

ಮೊದಲು ಬೆಡ್ ಕೊಡಿ, ಆಕ್ಸಿಜನ್ ಕೊಡಿ, ಜನರ ಪ್ರಾಣ ಉಳಿಸಿ. ಸತ್ತ ಮೇಲೆ ಕೊಡುವ ಪರಿಹಾರ ನಮಗೆ ಬೇಕಿಲ್ಲ. ಪರಿಸ್ಥಿತಿ ಹೀಗೆ ಹೋದ್ರೆ ಮುಂದಿನ ದಿನಗಳಲ್ಲಿ ವೈದ್ಯರು ಕೈ ಚೆಲ್ಲುತ್ತಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details