ಕರ್ನಾಟಕ

karnataka

ETV Bharat / state

ರಕ್ಷಿತಾ ಮನೆಗೆ ಭೇಟಿ ನೀಡಿದ ಕುಡಚಿ ಶಾಸಕ ರಾಜೀವ್: ತಾಂಡಾ ಅಭಿವೃದ್ಧಿ ನಿಗಮದಿಂದ ಮೂರು ಲಕ್ಷ ಪರಿಹಾರ - ಈಟಿವಿ ಭಾರತ್​ ಕನ್ನಡ

ಕುಡುಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ‌ ರಾಜೀವ್ ರಕ್ಷಿತಾ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸ್ವಾಂತನ ಹೇಳಿದರು.

MLA P Rajeev visited the Rakshita family
ರಕ್ಷಿತಾ ಮನೆಗೆ ಭೇಟಿ ನೀಡಿದ ಕುಡಚಿ ಶಾಸಕ ರಾಜೀವ್

By

Published : Sep 24, 2022, 7:46 PM IST

Updated : Sep 24, 2022, 8:03 PM IST

ಚಿಕ್ಕಮಗಳೂರು :ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಕುಟುಂಬಕ್ಕೆ ರಾಜ್ಯ ಸರ್ಕಾರ ಎಂಟು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಬೆಲೆ ಕಟ್ಟಲಾಗದ ಕೆಲಸ ಮಾಡಿರುವ ಕುಟುಂಬದ ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂದು ಕುಡುಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ‌ ರಾಜೀವ್ ರಕ್ಷಿತಾ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಚಿಕ್ಕಮಗಳೂರು ನಗರದ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಫಸ್ಟ್ ಪಿಯುಸಿ ಓದುತ್ತಿದ್ದ 18 ವರ್ಷದ ಯುವತಿ, ಐದು ದಿನಗಳ ಹಿಂದೆ ಸರ್ಕಾರಿ ಬಸ್​​​ನಿಂದ ಇಳಿಯುವಾಗ ಆಯಾ ತಪ್ಪಿ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ 18 ವರ್ಷದ ರಕ್ಷಿತಾ ಪೋಷಕರು ಆಕೆಯ ಸಾವಿನ ನೋವಿನಲ್ಲೂ ಎಲ್ಲ ಅಂಗಾಂಗಗಳನ್ನ ದಾನ ಮಾಡಿದ್ದರು. ಆಕೆಯ ಒಂಬತ್ತು ಅಂಗಾಂಗಳಿಂದ 9 ಜನರ ಜೀವ ಉಳಿದಿದೆ.

ಮೂಲತಃ ಚಿಕ್ಕಮಗಳೂರು ‌ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ರಕ್ಷಿತಾ ತಂದೆ ಶೇಖರ್ ನಾಯ್ಕ್ ತಾಯಿ ಲಕ್ಷ್ಮಿಬಾಯಿ ಮೃತ ಮಗಳ ಅಂಗಾಂಗಳನ್ನು ದಾನ ಮಾಡಿದ್ದರು. ಹಾಗಾಗಿ, ಸರ್ಕಾರ ಆಕೆಯ ಕುಟುಂಬಕ್ಕೆ ಪರಿಹಾರ ಎನ್ನುವುದಕ್ಕಿಂತ ಗೌರವಯುತವಾಗಿ ಮೂರು ಲಕ್ಷ ಹಣವನ್ನ ನೀಡಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ, ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ಹಣವನ್ನ ಸರ್ಕಾರ ಮಂಜೂರು ಮಾಡಿದೆ.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡುಚಿ ಶಾಸಕ ಪಿ.ರಾಜೀವ್ ಕಡೂರಿನ ಸೋಮನಹಳ್ಳಿ ತಾಂಡಾದ ರಕ್ಷಿತಾ ಮನೆಗೆ ಭೇಟಿ ನೀಡಿ ತಾಂಡ ಅಭಿವೃದ್ಧಿ ನಿಗಮದ ಒಂದು ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿಯ 2 ಲಕ್ಷ ಒಟ್ಟು ಮೂರು ಲಕ್ಷ ಹಣದ ಚೆಕ್ ನೀಡಿದರು. ಹೆತ್ತವರ ಜೊತೆಗೆ ಮಾತಾಡುವ ವೇಳೆಯಲ್ಲಿ ರಾಜೀವ್ ಭಾವುಕರಾದರು. ನಮ್ಮ ಸಮಾಜದ ಹೆಣ್ಣು ಮಗಳು ಸತ್ತ ಮೇಲು ಬದುಕಿದ್ದಾಳೆ. ಅತ್ಯಂತ ಎತ್ತರವಾದ ಸ್ಥಾನದಲ್ಲಿ ರಕ್ಷಿತಾ ಕುಟುಂಬವಿದೆ. 9 ಜೀವಗಳಿಗೆ ರಕ್ಷಿತಾ ಜೀವ ನೀಡಿದ್ದು, ಆ ಮನೆಗಳಲ್ಲಿ ಬೆಳಕಾಗಿದ್ದಾಳೆ.

ನಮ್ಮೆಲ್ಲರ ಜವಾಬ್ದಾರಿಯದ್ದು ರಕ್ಷಿತಾಳ ಕುಟುಂಬ ಎಂದಿಗೂ ಕಣ್ಣೀರ ಹಾಕಬಾರದು. ನಾವು ಜೊತೆ ನಿಲ್ಲಬೇಕಾಗಿದೆ ಎಂದರು. ರಕ್ಷಿತಾಳ ಕಾರ್ಯ ತಿಳಿದು ನಾನು ಮತ್ತು ಕಡೂರಿನ ಶಾಸಕರಾದ ಬೆಳ್ಳಿ ಪ್ರಕಾಶ್ ಮುಖ್ಯಮಂತ್ರಿಗಳ ಬಳಿ ತರಲಿ ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂಗಳನ್ನು ಮಂಜೂರು ಮಾಡಿಸಿದ್ದು, ಸರ್ಕಾರದ ಪ್ರತಿನಿಧಿಯಾಗಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮುಖ್ಯಮಂತ್ರಿ ಪರಿಹಾರ ನಿಧಿಯ 5 ಲಕ್ಷದ ಚೆಕ್‌ನ್ನು ನೀಡಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ಪುತ್ರಿಯ ಅಂಗಾಂಗ ದಾನ: ರಕ್ಷಿತಾ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ ಘೋಷಿಸಿದ ಸರ್ಕಾರ

Last Updated : Sep 24, 2022, 8:03 PM IST

ABOUT THE AUTHOR

...view details