ಕರ್ನಾಟಕ

karnataka

ETV Bharat / state

ಪಿಎಸ್‌ಐ ವರ್ಗಾವಣೆಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಸ್ತಕ್ಷೇಪ; ಪೊಲೀಸ್‌ ಅಧಿಕಾರಿಗಳಿಗೆ ಸಂಕಟ!

ಎಂ.ಎಲ್.ಎ ಎಲೆಕ್ಷನ್ ಹತ್ರ ಬರ್ತಿದ್ದಂತೆ ಹಾಲಿ-ಮಾಜಿ-ಆಕಾಂಕ್ಷಿಗಳೆಲ್ಲಾ ಚುನಾವಣೆಗೆ ಅಖಾಡ ರೆಡಿ ಮಾಡಿಕೊಳ್ತಿದ್ದಾರೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತ್ರ ಪಿಎಸ್‍ಐ ನೇಮಕಾತಿಯನ್ನೇ ಪ್ರತಿಷ್ಠೆಯಾಗಿಸಿಕೊಂಡು ಹಠಕ್ಕೆ ಬಿದ್ದಿದ್ದಾರೆ.

ಶಾಸಕ ಎಂ ಪಿ ಕುಮಾರಸ್ವಾಮಿ
ಶಾಸಕ ಎಂ ಪಿ ಕುಮಾರಸ್ವಾಮಿ

By

Published : Jun 10, 2022, 8:26 PM IST

ಚಿಕ್ಕಮಗಳೂರು:ಕಾಫಿನಾಡಿನ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅದೇಕೆ ದ್ವಂದ್ವಕ್ಕೆ ಸಿಲುಕಿದ್ದಾರೋ ಗೊತ್ತಿಲ್ಲ. ಹಳಬರನ್ನು ವರ್ಗಾವಣೆ ಮಾಡ್ಬೇಡಿ ಅಂತಾರೆ. ಹೊಸಬರಿಗೆ ಅವರೇ ಶಿಫಾರಸು ಪತ್ರ ಕೊಡ್ತಾರೆ. ಒಂದು ಸಲ ಮೂಡಿಗೆರೆಗೆ ನಾನೇ ಐಜಿ ಅಂತಾರೆ. ಮತ್ತೊಮ್ಮೆ ನಾನ್ ಪತ್ರಕ್ಕೆ ಬೆಲೆ ಕೊಡದಿದ್ರೆ ಐಜಿ ಕಚೇರಿ ಮುಂದೆ ಧರಣಿ ಕೂರುತ್ತೇನೆ ಅಂತಾರೆ. ಮಗದೊಮ್ಮೆ ಅವರನ್ನು ಟ್ರಾನ್ಸ್​ಫರ್​ ಮಾಡ್ಬೇಡಿ, ಇವರನ್ನು ಟ್ರಾನ್ಸ್​ಫರ್​ ಮಾಡ್ಲೇಬೇಕು ಅಂತಾರೆ. ಪೊಲೀಸ್ ಇಲಾಖೆಯೊಳಗೆ ಶಾಸಕ ಕುಮಾರಸ್ವಾಮಿ ಬಹಳ ಉದ್ದಕ್ಕೆ ಕೈ ಹಾಕಿರುವುದರಿಂದ ಸಬ್‍ಇನ್ಸ್​ಪೆಕ್ಟರ್​​ ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.


ಎಂ.ಎಲ್.ಎ ಎಲೆಕ್ಷನ್ ಹತ್ರ ಬರ್ತಿದ್ದಂತೆ ಹಾಲಿ-ಮಾಜಿ-ಆಕಾಂಕ್ಷಿಗಳೆಲ್ಲಾ ಚುನಾವಣೆಗೆ ಅಖಾಡ ರೆಡಿ ಮಾಡಿಕೊಳ್ತಿದ್ದಾರೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತ್ರ ಪಿಎಸ್‍ಐ ನೇಮಕಾತಿಯನ್ನೇ ಪ್ರತಿಷ್ಠೆಯಾಗಿಸಿಕೊಂಡು ಹಠಕ್ಕೆ ಬಿದ್ದಿದ್ದಾರೆ. ಮೊನ್ನೆ-ಮೊನ್ನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಯ ಪಿಎಸ್‍ಐಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸುದ್ದಿಯಾಗಿದ್ರು. ಈಗ ಮೂಡಿಗೆರೆ ಪಿ.ಎಸ್.ಐ ಸರದಿ.

ಪೊಲೀಸ್​ ಉಪನಿರೀಕ್ಷಕರಿಗೆ ಎಂ.ಪಿ.ಕುಮಾರಸ್ವಾಮಿ ಪತ್ರ

ಒಮ್ಮೆ ಮೂಡಿಗೆರೆ ಪಿ.ಎಸ್.ಐ ರವಿಯನ್ನು ವರ್ಗಾವಣೆ ಮಾಡಬಾರದು ಅಂತ ಐಜಿ ಪತ್ರ ಬರೆಯುತ್ತಾರೆ. ಮತ್ತೊಮ್ಮೆ ಅದೇ ಮೂಡಿಗೆರೆಯ ಅದೇ ಠಾಣೆಗೆ ಆದರ್ಶ್ ಎಂಬುವರನ್ನು ನೇಮಕಗೊಳಿಸುವಂತೆ ಶಿಫಾರಸು ಪತ್ರ ಕೊಡುತ್ತಾರೆ. ಇದು ಯಾವ ಲೆಕ್ಕ. ಯಾವ ನ್ಯಾಯ. ಒಂದೇ ಠಾಣೆಯ ಒಂದೇ ಕೆಲಸಕ್ಕೆ ಇಬ್ಬರು ಪಿಎಸ್‍ಐಗಳು ಏಕೆ?. ದ್ವಂದ್ವದ ನಿಲುವಿನೊಂದಿಗೆ ಪಿಎಸ್‍ಐ ನೇಮಕಾತಿಯಲ್ಲಿ ಶಾಸಕರ ಹಸ್ತಕ್ಷೇಪ ಪಿಎಸ್‍ಐಗಳಿಗೂ ಮಾನಸಿಕ ಹಿಂಸೆಯಾಗಿದೆ. ಬಂದರೂ ಕಾನೂನಿನಡಿಯಲ್ಲಿ ಕೆಲಸ ಮಾಡುವುದು ಹೇಗೆ?. ಶಾಸಕರು ಹೇಳಿದಂತೆಯೇ ಕೆಲಸ ಮಾಡಬೇಕಾಗುತ್ತದೆ ಎಂದು ಚಿಂತೆಯಾಗಿದೆ.

ಪಿಎಸ್​ಐ ಅವರಿಗೆ ಪೊಲೀಸ್​ ಠಾಣೆ ನಿಯುಕ್ತಿಗೊಳಿಸಲು ಪತ್ರ ಬರೆದಿರುವುದು

ಮಲ್ಲಂದೂರು ಪಿಎಸ್‍ಐ ರವೀಶ್ ಟ್ರಾನ್ಸ್​ಫರ್​ ಆಗ್ತಿಲ್ಲ. ಕುಮಾರಸ್ವಾಮಿ ಎತ್ತಿ ಹಾಕಿಸುವ ಪ್ರಯತ್ನ ಬಿಡ್ತಿಲ್ಲ. ಇದು ಕೂಡ ಅವರ ಹಠಕ್ಕೆ ಕಾರಣವಾಗಿದ್ದು ಪತ್ರದ ಮೇಲೆ ಪತ್ರ ಬರೆಯುತ್ತಲೇ ಇದ್ದಾರೆ. ಅಂದು ಪಿಎಸ್‍ಐಗೆ ಯಾವನೋ ಐಜಿ. ಮೂಡಿಗೆರೆಗೆ ನಾನೇ ಐಜಿ. ಅವನಿಗೆ ಹೋಗಿ ಹೇಳು ಎಂದಿದ್ದವರು, ಇಂದು ಮತ್ತೊಂದು ಪತ್ರ ಬರೆದು ಮೂಡಿಗೆರೆ ಪಿಎಸ್‍ಐ ರವಿ ವರ್ಗಾವಣೆಯನ್ನು ಕ್ಯಾನ್ಸಲ್ ಮಾಡಿ. ಮಲ್ಲಂದೂರು ಪಿಎಸ್‍ಐ ರವೀಶ್‍ನನ್ನು ವರ್ಗಾವಣೆ ಮಾಡಿ ಎಂದು ಅದೇ ಐಜಿಗೆ ಪತ್ರ ಬರೆದಿದ್ದಾರೆ. ನೀವು ನಮ್ಮ ಪತ್ರಕ್ಕೆ ಮನ್ನಣೆ ನೀಡದಿದ್ರೆ ನಿಮ್ಮ ಕಚೇರಿ ಮುಂದೆ ಧರಣಿ ಮಾಡುವುದಾಗಿ ಐಜಿಗೆ ಬೆದರಿಕೆ ಪತ್ರ ಬರೆದಿದ್ದಾರೆ.

ಮೂಡಿಗೆರೆ ಪಿ.ಎಸ್.ಐ ರವಿ

ಇದನ್ನೂ ಓದಿ:ರೋಹಿತ್ ಚಕ್ರತೀರ್ಥ ಬಂಧಿಸಿ, ಸಚಿವ ನಾಗೇಶ್​ ವಜಾಗೊಳಿಸಿ: ಸಿದ್ದರಾಮಯ್ಯ ಆಗ್ರಹ

For All Latest Updates

TAGGED:

ABOUT THE AUTHOR

...view details