ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಶಾಸಕ ಎಂ ಪಿ ಕುಮಾರಸ್ವಾಮಿ ಇಂದು ನಡೆದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಬಗ್ಗೆ ಕೇಳಿದ್ರೇ ತಮಗಾದ ಅಸಮಾಧಾವವನ್ನ ಅವರು ನಗು ನಗುತ್ತಲೇ ಹೊರ ಹಾಕಿದ್ದಾರೆ.
ಸಚಿವನಾಗಲಿಲ್ಲ, ಅದಕ್ಕೇ ಕ್ಷೇತ್ರಕ್ಕೆ ಬಂದೆ, ನಗುನಗುತ್ತಲೇ ಕುಮಾರಸ್ವಾಮಿ ಅಸಮಾಧಾನ..
ಸಚಿವ ಸ್ಥಾನ ಆಕ್ಷಾಂಕಿಯಾಗಿದ್ದ ಮೂಡಿಗೆರೆ ಕ್ಷೇತ್ರದ ಶಾಸಕ ಎಂ ಪಿ ಕುಮಾರಸ್ವಾಮಿಯವರು ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗದೆ ಸ್ವಕ್ಷೇತ್ರಕ್ಕೆ ವಾಪಾಸಾಗಿದ್ದಾರೆ. ಆದರೆ, ತಮ್ಮೊಳಗಿನ ಬೇಗುದಿಯನ್ನ ನಗು ನಗುತ್ತಲೇ ವ್ಯಕ್ತಪಡಿಸಿದ್ದಾರೆ.
ನಿನ್ನೆ ತಡರಾತ್ರಿ ತನಕ ಬೆಂಗಳೂರಿನಲ್ಲೇ ಇದ್ದ ಶಾಸಕ ಎಂ ಪಿ ಕುಮಾರಸ್ವಾಮಿ ಅವರು, ಬಲಗೈ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗದ ಹಿನ್ನಲೆ ಸ್ವಲ್ವ ಅಸಮಾಧಾನ ಗೊಂಡಿದ್ದಾರೆ. ಬೆಳಗ್ಗೆಯೇ ಬೆಂಗಳೂರಿನಿಂದ ಮೂಡಿಗೆರೆಗೆ ವಾಪಸಾಗಿದ್ದಾರೆ. ಆ ಮೂಲಕ ತಮಗಿರುವ ಅಸಮಾಧಾನ ತೋರ್ಪಡಿಸಿದ್ದಾರೆ.
ಮೂಡಿಗೆರೆ ತಾಲೂಕು ಮಹಾ ಮಳೆಗೆ ತತ್ತರಿಸಿ ಹೋಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಇತರೇ ಸಮಾಜದವರು ಕ್ಷೇತ್ರಕ್ಕೆ ಬಂದೂ ಹೋಗಿದ್ದಾರೆ. ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬರುವ ಹಿನ್ನೆಲೆ ಕೇತ್ರದಲ್ಲಿ ಇದ್ದೇನೆ, ನಾನೇನೂ ಸಚಿವನಾಗಿಲ್ಲ. ಆದ್ದರಿಂದ ನಾನು ಕ್ಷೇತ್ರಕ್ಕೆ ವಾಪಸ್ ಬಂದೆ. ನಮ್ಮ ಸಮುದಾಯಕ್ಕೆ ಮುಂದಿನ ಸಾರಿ ನಿರ್ಲಕ್ಷ್ಯ ಮಾಡಬಾರದು. ಯಾರಿಗಾದರೂ ಮಂತ್ರಿ ಸ್ಥಾನ ಕೊಡಲಿ, ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ ಎಂದು ನಗು ನಗುತ್ತಲೇ ತಮ್ಮ ಅಸಮಾಧಾನ ಹೊರಹಾಕಿದರು.