ಕರ್ನಾಟಕ

karnataka

ETV Bharat / state

ನನ್ನ ವಿರುದ್ಧ ಸ್ವಪಕ್ಷೀಯರಿಂದಲೇ ಅಪಪ್ರಚಾರ ನಡೆಯುತ್ತಿದೆ: ಶಾಸಕ ಎಂ.ಪಿ.ಕುಮಾರಸ್ವಾಮಿ - MLA Kumaraswamy spoke about BJP

ಬಿಜೆಪಿ ಮುಖಂಡರು, ಪಕ್ಷ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನಾನು ಕಾಂಗ್ರೆಸ್ ಸೇರುವುದು ಸುಳ್ಳು. ಇದನ್ನು ಯಾರೂ ನಂಬುವುದಿಲ್ಲ ಎಂದರು.

mla-kumaraswamy-spoke-about-bjp
ಶಾಸಕ ಎಂ ಪಿ ಕುಮಾರಸ್ವಾಮಿ

By

Published : Jan 2, 2022, 1:40 PM IST

ಚಿಕ್ಕಮಗಳೂರು:ನಮ್ಮ ಪಕ್ಷದವರೇ ನನ್ನ ವಿರುದ್ದ ಪಿತೂರಿ ನಡೆಸುತ್ತಿದ್ದಾರೆ. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನೇಕೆ ಕಾಂಗ್ರೆಸ್‌ಗೆ ಹೋಗಲಿ?, ನಾನು ಪಕ್ಷದ ನಿಷ್ಠಾವಂತ ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಮುಖಂಡರು, ಪಕ್ಷ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನಾನು ಕಾಂಗ್ರೆಸ್ ಸೇರುವುದು ಸುಳ್ಳು. ಇದನ್ನು ಯಾರೂ ನಂಬುವುದಿಲ್ಲ ಎಂದರು.


ಸಂಪುಟ ಪುನರ್ ರಚನೆ ಸಮಯದಲ್ಲಿ ಮಾತ್ರ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹೊರಬರುತ್ತೆ. ನಾನು ಎಲ್ಲಿಯೂ ಸಚಿವ ಸ್ಥಾನ, ಬೋರ್ಡ್‌ಗಾಗಿ ಲಾಬಿ ಮಾಡಿಲ್ಲ. ಆದರೂ, ಈ ರೀತಿ ಸುದ್ದಿ ಹೊರ ಬರುತ್ತಿದೆ. ಇದನ್ನು ವಿರೋಧ ಪಕ್ಷದವರಿಗಿಂತ ನಮ್ಮ ಪಕ್ಷದವರೇ ಮಾಡುತ್ತಿದ್ದಾರೆ. ನಮ್ಮವರೇ ಕೆಲವರು ಕಾಂಗ್ರೆಸ್ ಸೇರುವ ಸುದ್ದಿ ಹರಿಬಿಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಹೊಸ ವರ್ಷಾಚರಣೆ ವೇಳೆ ಚಾಕು ಇರಿತ: ಕಲಬುರಗಿಯಲ್ಲಿ ಯುವಕ ಸಾವು

ABOUT THE AUTHOR

...view details